ಕಿಚ್ಚನ ಭೇಟಿಗಾಗಿ ಅನ್ನ ನೀರು ಬಿಟ್ಟ ಅಭಿಮಾನಿ



ಅತಿಯಾದರೆ ಅಮೃತನೂ ವಿಷ ಅನ್ನುವುದು ಸಾಕಷ್ಟು ಭಾರಿ ಸಾಭೀತಾಗುತ್ತದೆ. ಸದ್ಯ ಈಗ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಯ ಅಭಿಮಾನ ಅತಿರೇಕದ ನಡವಳಿಕೆ ತಲೆನೋವಾಗಿದೆ. ಈ ರೀತಿ ಸುದೀಪ್ ಅವರಿಗೆ ಆಗುತ್ತಿರುವುದು ಮೊದಲೇನಲ್ಲಾ. ಇಂತಹ ಸಂದರ್ಭವನ್ನ ಈಗಾಗಲೇ ಸಾಕಷ್ಟು ಭಾರಿ ನಿಭಾಯಿಸಿದ್ದಾರೆ ಅಭಿನಯ ಚಕ್ರವರ್ತಿ.
ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಬೇಕು ಎನ್ನುವ ಉದ್ದೇಶದಿಂದ ಅಭಿಮಾನಿಯೊಬ್ಬ ಉಪವಾಸ ಮಾಡಲು ಮುಂದಾಗಿದ್ದಾನೆ. ಕಿಚ್ಚನ ಭೇಟಿಯೊಂದೇ ಇದರ ಉದ್ದೇಶವಾಗಿದ್ಯಂತೆ. ಕನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ವಾಸವಾಗಿರುವ ಕಿಚ್ಚ ಶಿವು ಉಪವಾಸ ಮಾಡುತ್ತೇನೆ ಎಂದು ಮುಂದಾಗಿದ್ದಾನೆ. ಸುದೀಪ್ ಅವರನ್ನ ನೋಡಬೇಕು ಎಂದು ಈ ರೀತಿ ಮಾಡುತ್ತಿದ್ದಾನೆ. ಈ ವಿಚಾರವನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಸುದೀಪ್ ಗಾಗಿ ಉಪವಾಸ ಮಾಡುತ್ತೇನೆ ಎಂದು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಮಿಕ್ಕ ಅಭಿಮಾನಿಗಳು ಶಿವು ನಿಲುವಿಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಅವರನ್ನ ಭೇಟಿ ಮಾಡಲು ಸಾವಿರ ದಾರಿಯಿದೆ ಅದನ್ನ ಬಿಟ್ಟು ಈ ರೀತಿ ಮಾಡುವುದು ತಪ್ಪು ಎಂದಿದ್ದಾರೆ.
Comments