ರಣವೀರ್-ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಡೇಟ್ ಫಿಕ್ಸ್ ?
ಬಾಲಿವುಡ್ ನ ಲವ್ಲೀ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ ಮದುವೆ ಮುಹೂರ್ತ ಫಿಕ್ಸ್ ಆಗಿದೆಯಂತೆ. ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ಜಲ ಕಳೆದ ವಾರವಷ್ಟೆ ಬೆಂಗಳೂರಿನಿಂದ ಮುಂಬೈಗೆ ಬಂದಿದ್ರು.
ರಣವೀರ್ ಹೆತ್ತವರನ್ನು ಭೇಟಿಯಾಗಿ ಮದುವೆ ಮಾತುಕತೆ ನಡೆಸಿದ್ದಾರೆ. ದೀಪಿಕಾಳ ಪ್ರಭಾದೇವಿ ನಿವಾಸದಲ್ಲಿ ಮಾತುಕತೆ ನಡೆದಿದೆ. ನಂತರ ಎಲ್ಲರೂ ಒಟ್ಟಾಗಿ ವರ್ಲಿಯ ರೆಸ್ಟೋರೆಂಟ್ ಒಂದರಲ್ಲಿ ಭೋಜನ ಸವಿದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರಂತೆ ದೀಪಿಕಾ ರಣವೀರ್ ಕೂಡ ಮಾಧ್ಯಮಗಳಿಂದ ದೂರವಾಗಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲು ಬಯಸ್ತಿದ್ದಾರೆ. ಆದ್ರೆ ಮದುವೆ ಮುಂಬೈ ಅಥವಾ ದೆಹಲಿಯಲ್ಲಿ ನಡೆಯಲಿ ಅನ್ನೋದು ರಣವೀರ್ ಫೋಷಕರ ಆಸೆ. ಅಪ್ಪಟ ದಕ್ಷಿಣ ಭಾರತೀಯ ಸಂಪ್ರದಾಯದಂತೆ ವಿವಾಹ ನೆರವೇರಲಿದೆ. ನಂತರ ಅದ್ಧೂರಿ ರಿಸೆಪ್ಷನ್ ಕೂಡ ನಡೆಯಲಿದೆ. ಸದ್ಯ ದೀಪಿಕಾ, ರಣವೀರ್ ಪೋಷಕರೊಂದಿಗೆ ಲಂಡನ್ ಗೆ ತೆರಳಿದ್ದು, ಮದುವೆ ಶಾಪಿಂಗ್ ಶುರು ಮಾಡಿದ್ದಾರಂತೆ. ರಣವೀರ್, ಗಲ್ಲಿ ಬಾಯ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋದ್ರಿಂದ ಲಂಡನ್ ಗೆ ತೆರಳಿಲ್ಲ. ಮದುವೆಗೆ ಇನ್ನು ಕೇವಲ 3-4 ತಿಂಗಳು ಬಾಕಿಯಿದೆ ಎನ್ನುತ್ತಿವೆ ಮೂಲಗಳು. ಆದ್ರೆ ನಿರ್ದಿಷ್ಟ ದಿನಾಂಕ ಇನ್ನೂ ಬಹಿರಂಗವಾಗಿಲ್ಲ.
Comments