ಅಪರೂಪದ ಖಾಯಿಲೆ ತುತ್ತಾಗಿರುವ ಬಾಲಿವುಡ್ ನಟ ಇರ್ಫಾನ್ ಖಾನ್

ಇದೀಗ ಸ್ವತಃ ಇರ್ಫಾನ್ ಅವರೇ ತಮ್ಮ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾತನಾಡಿದ್ದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಜನರು ಊಹೆ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ . ಕಳೆದ ತಿಂಗಳು ನಿರ್ದೇಶಕ ವಿಶಾಲ್ ಭಾರದ್ವಾಜ್, ದೀಪಿಕಾ ಪಡುಕೋಣೆ ಮತ್ತು ಇರ್ಫಾನ್ ನಟನೆಯ ಚಿತ್ರ ಶೂಟಿಂಗ್ ನ್ನು ಮುಂದೂಡುವುದಾಗಿ ಹೇಳಿದ್ದರು.
ನನ್ನ ಚಿತ್ರದ ಇಬ್ಬರು ಮುಖ್ಯ ನಟರು ಬೇರೆ ಬೇರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಚಿತ್ರದ ಶೂಟಿಂಗ್ ನ್ನು ಮುಂದೂಡಲು ನಿರ್ಧರಿಸಿದ್ದೇನೆ. ಇರ್ಫಾನ್ ಜಾಂಡೀಸ್ ನಿಂದ ಬಳಲುತ್ತಿದ್ದಾರೆ ಎಂದು ವಿಶಾಲ್ ಭಾರದ್ವಾಜ್ ಹೇಳಿದ್ದರು. ನೀವು ಜೀವನವನ್ನು ಘಾಸಿಗೊಳಿಸುವಂತಹ ಘಟನೆಗಳು ನಡೆಯುತ್ತವೆ. ಕಳೆದ 15 ದಿನಗಳಲ್ಲಿ ನನ್ನ ಜೀವನ ಶಂಕಾಸ್ಪದ ಕಥೆಯಾಗಿದೆ. ಅಪರೂಪದ ಕಥೆಯನ್ನು ಹುಡುಕಲು ಹೊರಟು ಅಪರೂಪದ ರೋಗದ ಬಗ್ಗೆ ತಿಳಿಯುವಂತಾಗಿದೆ ಎಂದು ಇರ್ಫಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ನಾನು ನನ್ನ ಜೀವನದಲ್ಲಿ ಎಂದಿಗೂ ಸೋತಿಲ್ಲ, ನನ್ನ ಮುಂದಿರುವ ಆಯ್ಕೆಗಳಿಂದ ಹೋರಾಟ ನಡೆಸಿದ್ದೇನೆ ಮತ್ತು ಹಾಗೆಯೇ ಇರಲು ಬಯಸುತ್ತೇನೆ. ನನ್ನ ಕುಟುಂಬದವರು ಮತ್ತು ಸ್ನೇಹಿತರು ನನ್ನ ಜೊತೆಗಿದ್ದಾರೆ. ಸಾಧ್ಯವಾದಷ್ಟು ಉತ್ತಮವಾದುದನ್ನು ಪಡೆಯಲು ಹೋರಾಡುತ್ತೇವೆ. ಇನ್ನು 8-10 ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ಸಂಶಯಪಡುವುದು ಬೇಡ, ನನಗೆ ಒಳ್ಳೆಯದನ್ನು ಬಯಸಿ ಎಂದಿದ್ದಾರೆ.
Comments