ರ‍್ಯಾಂಪ್ ಮೇಲೆ ಮಿಂಚಿದ ರಾಕಿಂಗ್ ಜೋಡಿ

06 Mar 2018 3:30 PM | Entertainment
521 Report

ಫಾರಿನ್ ಟ್ರಿಪ್ ಮುಗಿಸಿ ಬಂದಿರೋ ಸ್ಯಾಂಡಲ್‍ವುಡ್‍ನ ಮುದ್ದಾದ ಜೋಡಿಗಳಲ್ಲಿ ಒಂದಾದ ಯಶ್ ಮತ್ತು ರಾಧಿಕಾ ಪಂಡಿತ್ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ರಾಕಿಂಗ್ ಜೋಡಿ ಸುಂದರ ಸಂಜೆಯಲ್ಲಿ ರ‍್ಯಾಂಪ್ ಮೇಲೆ ಫುಲ್ ಮಿಂಚಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆ ಆಯೋಜಿಸಿದ್ದ ಯುಗಾದಿ ಹಬ್ಬದ ಬಟ್ಟೆ ಕಲೆಕ್ಷನನ್ನು ರಾಮಾಚಾರಿ ಜೋಡಿ ಲಾಂಚ್ ಮಾಡಿತು.

ಮಾಡೆಲ್‍ಗಳ ಜೊತೆ ರ‍್ಯಾಂಪ್ ಮೇಲೆ ಬಂದ ಯಶ್-ರಾಧಿಕಾ ಜೋಡಿಯನ್ನು ಅಭಿಮಾನಿಗಳು ನೋಡಿ ಫುಲ್ ಖುಷಿಯಾದರು. ಒಂದು ಡೈಲಾಗ್ ಹೇಳು ಗುರು. ಯಶ್ ಒಂದು ಹಾಡು ಹಾಡಿ ಎಂದು ಫ್ಯಾನ್ಸ್ ಕೂಗುತ್ತಿದಂತೆ ಯಶ್ ಮೈಕ್ ಹಿಡಿದು ಭರ್ಜರಿ ಮನರಂಜನೆ ನೀಡಿದರು. ಯಶ್-ರಾಧಿಕಾ ಜೋಡಿ ಡೈಲಾಗ್ ಎಲ್ಲರನ್ನು ಖುಷಿಪಡಿಸಿತು. ರೀಲ್ ಹಾಗೂ ರಿಯಲ್ ಎರಡೂ ಕಡೆ ಸೂಪರ್ ಜೋಡಿ ಎನಿಸಿಕೊಂಡಿರೋ ಯಶ್ ಮತ್ತು ರಾಧಿಕಾ ಪಂಡಿತ್ ಅಡ್ವಾನ್ಸ್ ಆಗಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಹೊಸ ಡಿಸೈನ್‍ಗಳನ್ನ ಕೂಡ ಲಾಂಚ್ ಮಾಡಿದ್ದಾರೆ.

Edited By

Shruthi G

Reported By

Shruthi G

Comments