ಪ್ರಿಯಾ ವಾರಿಯರ್ ಇನ್ಸ್ಟಾಗ್ರಮ್ ಪೋಸ್ಟ್ ವೊಂದಕ್ಕೆಎಷ್ಟುಹಣಗಳಿಸ್ತಾರೆ ಗೋತ್ತಾ..?

ತನ್ನ ಕಣ್ಣಿನ ಸನ್ನೆಯಯ ಮೂಲಕ ಎಲ್ಲರ ಮನ ಗೆದ್ದಿರುವ ಪ್ರಿಯಾ ವಾರಿಯರ್ ಇತ್ತೀಚಿಗೆ ಎಲ್ಲ ಖ್ಯಾತ ನಟ ನಟಿಯರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಫೇಸ್ ಬುಕ್ ಮಾಲೀಕನನ್ನು ಸಹ ಇವರು ಹಿಂದಿಕ್ಕಿ ಮುನ್ನಡೆಯುತ್ತಿರುವ ಪ್ರಿಯಾರವರ ಒಂದು ಇನ್ಸ್ಟಾಗ್ರಮ್ ಪೋಸ್ಟ್ ಗೆ ಎಷ್ಟು ಹಣ ಬರುತ್ತೆ ಅಂತ ಕೇಳಿದ್ರ್ರೆ ಬಾಯಿ ಮೇಲೆ ಬೆರಳಿಡೊದು ಗ್ಯಾರಂಟಿ.
ಒಂದು ಪೋಸ್ಟ್ ಗೆ 8 ಲಕ್ಷ ರೂ. ಸಂಭಾವನೆ ಪಡೆಯುವ ಮೂಲಕ ಪ್ರಿಯಾ ಹೊಸ ದಾಖಲೆಯನ್ನು ಬರೆದಿದ್ದಾರೆ. ಸೆಲಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಕಂಪೆನಿಗಳ ಪರ ಪ್ರಚಾರಕ್ಕಾಗಿ ಪೋಸ್ಟ್ ಗಳನ್ನು ಮಾಡುತ್ತಾರೆ. ಅದಕ್ಕಾಗಿ ಇಷ್ಟು ಪ್ರಮಾಣದ ಹಣ ವನ್ನು ಪಡೆಯುತ್ತಾರೆ. ಆದರೆ ಇಷ್ಟು ಕಡಿಮೆ ದಿನದಲ್ಲಿ ಇಷ್ಟು ಪ್ರಮಾಣದ ಹಣವನ್ನು ಪಡೆಯುತ್ತಿರುವುದು ಪ್ರಿಯಾ ಮಾತ್ರ ಎನ್ನಲಾಗಿದೆ. 'ಒರು ಆಡಾರ್ ಲವ್' ಚಿತ್ರದ ಹಾಡೊಂದರಲ್ಲಿ ಕಣ್ ಹೊಡೆಯುವ ಮೂಲಕ ಪಡ್ಡೆ ಹುಡುಗರ ಮನಗೆದ್ದಿದ್ದ ಪ್ರಿಯಾ ಪ್ರಕಾಶ್ ವಾರಿಯರ್, ಟೀಸರ್ ನಲ್ಲಿಯೂ ಅಂದವಾಗಿ ಕಾಣಿಸಿಕೊಂಡಿದ್ದರು. ಸದ್ಯ ಈಕೆ ಅಭಿನಯದ ಚೊಚ್ಚಲ ಸಿನಿಮಾ 'ಒರು ಆಡಾರ್ ಲವ್' ಜೂನ್ ತಿಂಗಳಲ್ಲಿ ತೆರೆಕಾಣಲಿದೆ. ಕಳೆದ ತಿಂಗಳಲ್ಲಿ ಕಾಣಿಸಿಕೊಂಡ ಶೇ.90ಕ್ಕೆ ಹೆಚ್ಚಿನ ಮೆಮೆಗಳಲ್ಲಿ ಪ್ರಿಯಾ ಇದ್ದರು ಎನ್ನಲಾಗಿದೆ. ದೇಶದ ಮೂಲೆ ಮೂಲೆಯಲ್ಲಿಯೂ ಪ್ರಿಯಾ ಅಭಿಮಾನಿಗಳು ಹುಟ್ಟುಕೊಂಡಿದ್ದು, ನಟನೆಗೆ ಬೇರಾಗಿದ್ದರೆ ಅವರ ಅಭಿಮಾನಿಗಳು.
Comments