ಅವಳಿ ಮಕ್ಕಳಿಗೆ ತಾಯಿಯಾದ ಸನ್ನಿ

ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿಗೆ ಈಗ ಮೂವರು ಮಕ್ಕಳು. ಕೆಲ ದಿನಗಳ ಹಿಂದಷ್ಟೆ ನಿಶಾ ಎಂಬ ಹೆಣ್ಣುಮಗುವೊಂದನ್ನು ಸನ್ನಿ ಲಿಯೋನ್ ದತ್ತು ಪಡೆದಿದ್ದರು. ಈಗ ಸನ್ನಿ ಹಾಗೂ ಡೇನಿಯಲ್ ಅವಳಿ ಗಂಡು ಮಕ್ಕಳನ್ನು ವೆಲ್ಕಮ್ ಮಾಡಿದ್ದಾರೆ.
ಈ ಸಂತಸದ ಸುದ್ದಿಯನ್ನು ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾಳೆ. ಮಕ್ಕಳಿಗೆ ಅಶರ್ ಸಿಂಗ್ ವೆಬರ್ ಹಾಗೂ ನೋಹ್ ಸಿಂಗ್ ವೆಬರ್ ಎಂದು ಹೆಸರಿಟ್ಟಿದ್ದಾರೆ. ಅವಳಿ ಮಕ್ಕಳ ಆಗಮನದೊಂದಿಗೆ ತಮ್ಮ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಅಂತಾ ಸನ್ನಿ ಹೇಳಿದ್ದಾರೆ. ಅವಳಿ ಮಕ್ಕಳ ಫೋಟೋವನ್ನು ಸಹ ಟ್ವಿಟ್ಟರ್ ನಲ್ಲಿ ಹಾಕಿದ್ದಾಳೆ. ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಕೂಡ ಮತ್ತೆ ತಂದೆಯಾಗಿರೋ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.
Comments