ಚಾಲೆಂಜಿಂಗ್ ಸ್ಟಾರ್ ಗೆ ಮೈಸೂರಿನ ಗೆಳೆಯರಿಂದ ದೊರೆತ ಪುರಸ್ಕಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಅಪಾರ ಸ್ನೇಹಿತರ ಬಳಗವನ್ನ ಹೊಂದಿರುವಂತಹ ನಟ. ದರ್ಶನ್ ಸುತ್ತಾ ಮುತ್ತ ಸಾಕಷ್ಟು ಜನ ಸ್ನೇಹಿತರು ಸದಾ ಇರುತ್ತಾರೆ. ಆನ್ ಸ್ಕ್ರೀನ್ ,ಆಫ್ ಸ್ಕ್ರೀನ್ ಎರಡರಲ್ಲೂ ಫ್ರೆಂಡ್ಸ್ ಗಳನ್ನ ಹೊಂದಿದ್ದು ದರ್ಶನ್ ಇದ್ದಲ್ಲಿ ಸ್ನೇಹಿತರು ಇರುತ್ತಾರೆ
ಶಾಲೆಯ ದಿನಗಳಲ್ಲಿ ದರ್ಶನ್ ಜೊತೆ ಓದಿದ ಎಲ್ಲಾ ಗೆಳೆಯರು ವರ್ಷಕ್ಕೆ ಒಂದು ಬಾರಿ ಸೇರಿ ಕೆಲ ಸಮಯ ಕಳೆಯುವುದು ದರ್ಶನ್ ಮತ್ತು ಗೆಳೆಯರು ಹಿಂದಿನಿಂದಲೂ ರೂಡಿಸಿಕೊಂಡು ಬಂದಿದ್ದಾರೆ. ರೀತಿ ಇತ್ತೀಚಿಗಷ್ಟೆ ಗೆಳೆಯರೆಲ್ಲಾ ಒಟ್ಟಿಗೆ ಸೇರಿದ್ದರು ಆ ಸಮಯದಲ್ಲಿ ದರ್ಶನ್ ಗಾಗಿ ಹೂವಿನ ಕವಚವನ್ನ ಮಾಡಿಸಲಾಗಿತ್ತು.ಸಾಮಾನ್ಯವಾಗಿ ಗೆಳೆಯನಿಗೆ ಹೂವಿನ ಹಾರ ಹಾಕುವುದು, ಶಾಲು ಹೊದಿಸಿ ಸನ್ಮಾನ ಮಾಡುವುದು ಸರ್ವೇ ಸಾಮಾನ್ಯ ಎಂದು ಪರಿಗಣಿಸಿದ ಸ್ನೇಹಿತರು ವಿಶೇಷವಾಗಿರಲಿ ಎಂದು ಹೂವಿನ ಹೊದಿಕೆಯನ್ನ ಮಾಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ರೀ ಯೂನಿಯನ್ ಸಮಾರಂಭದಲ್ಲಿ ದರ್ಶನ್ ಜೊತೆ ವ್ಯಾಸಂಗ ಮಾಡಿದ ಶಾಲೆಯ ಗೆಳೆಯರು ಹಾಗೂ ಚಿತ್ರರಂಗದ ಸ್ನೇಹಿತರು ಕೂಡ ಭಾಗಿ ಆಗಿದ್ದು ವಿಶೇಷವಾಗಿತ್ತು.
Comments