ಸೂರಿ ನಿರ್ದೇಶನಕ್ಕೆ ಮನ ಸೋತ ಕಿಚ್ಚ

ಇತ್ತೀಚಿಗೆ ಬಿಡುಗಡೆಯಾದ ಟಗರು ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಗರಿನ ಪೊಗರಿಗೆ ಪ್ರೇಕ್ಷಕರೆಲ್ಲ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ನೋಡಿದ ಕಿಚ್ಚ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಪ್ರೇಕ್ಷಕನಂತೆ ಸಿನಿಮಾ ವೀಕ್ಷಣೆ ಮಾಡಿದ ಕಿಚ್ಚ ತಮ್ಮ ಸ್ಟೈಲ್ ನಲ್ಲಿ ಸಿನಿಮಾ ವಿಮರ್ಶೆ ಮಾಡಿದ್ದಾರೆ. ಹಾಗಾದರೆ ಟಗರಿನ ಪೊಗರಿನ ಬಗ್ಗೆ ಕಿಚ್ಚ ಏನು ಹೇಳಿದ್ರು ?
ವಿಶೇಷವಾಗಿರುವ ಟಗರು ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ. ತೆರೆ ಮೇಲೆ ಬರುವ ಪ್ರತಿ ಪಾತ್ರವೂ ಜನರನ್ನ ಕನ್ಫೂಸ್ ಮಾಡುತ್ತದೆ. ಚಿತ್ರರಂಗದಲ್ಲಿ ಕಥೆ ಹೇಳುವ ವಿಭಿನ್ನ ಪ್ರಯತ್ನ ತುಂಬಾ ಚೆನ್ನಾಗಿ ಆಗಿದೆ ಎಂದಿದ್ದಾರೆ ಸುದೀಪ್ ಈಗಾಗಲೇ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿರುವ ಟಗರು ಸಿನಿಮಾದ ಪಾತ್ರಗಳು ಕಿಚ್ಚನನ್ನು ಕಾಡುವುದಕ್ಕೆ ಶುರು ಮಾಡಿದೆ. ಇಂತಹ ಸಿನಿಮಾ ನಿರ್ದೇಶನ ಮಾಡಲು ನಿರ್ದೇಶಕ ಸೂರಿಯಿಂದ ಮಾತ್ರ ಸಾಧ್ಯ ವಿಭಿನ್ನ ಎನ್ನಿಸುವ ಪಾತ್ರಗಳ ಹೆಸರು ಎಲ್ಲವೂ ಸೂಪರ್. ಅದರ ಜೊತೆಯಲ್ಲಿ ಪಾತ್ರಕ್ಕೆ ತಕ್ಕಂತ ಸ್ಥಳಗಳ ಆಯ್ಕೆ ಎಲ್ಲವೂ ಅದ್ಬುತ ಎಂದಿದ್ದಾರೆ ಸುದೀಪ್.
ಸಿನಿಮಾದಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡುವುದಾದರೆ ಎನರ್ಜಿ, ಅಭಿನಯ ಎಲ್ಲವೂ ತುಂಬಾ ಚೆನ್ನಾಗಿದೆ. ತೆರೆ ಮೇಲೆ ಶಿವರಾಜ್ ಕುಮಾರ್ ಅದ್ಬುತವಾಗಿ ಕಾಣಿಸುತ್ತಾರೆ ಇಡೀ ರಾಜ್ಯವೇ ಟಗರು ಸಿನಿಮಾ ನೋಡಿ ಇಂಪ್ರೆಸ್ ಆಗಿರುವ ಡಾಲಿ ಪಾತ್ರಕ್ಕೆ ಕಿಚ್ಚ ಕೂಡ ಫಿದಾ ಆಗಿದ್ದಾರೆ. ಧನಂಜಯ ಅವರ ಸ್ಕ್ರೀನ್ ಅಪಿಯರೆನ್ಸ್ ಹಾಗೂ ಪಾತ್ರ ಎರಡು ತುಂಬಾ ಇಷ್ಟ ಪಟ್ಟಿದ್ದಾರೆ. ಸಿನಿಮಾ ವಿಮರ್ಶೆ ಮಾಡಿ ಬರೆದ ಕಿಚ್ಚ ಸುದೀಪ್ ಇಡೀ ಟಗರು ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಸಾಧ್ಯ ಎನ್ನಿಸುವುದನ್ನು ಸಾಧ್ಯ ಮಾಡಿ ತೋರಿಸುವುದಕ್ಕೆ ಸಿನಿಮಾತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದಿದ್ದಾರೆ.
Comments