ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಹುಟ್ಟಿಕೊಂಡ ಅನುಮಾನಗಳ ಭೂತ ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ಪವಿತ್ರ ಗೌಡ ಅವರ ಫೋಟೋಗಳು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಹೆಚ್ಚು ಸದ್ದು ಮಾಡಿತ್ತು. ಈ ಫೋಟೋಗಳನ್ನ ನೋಡಿದ ಅಭಿಮಾನಿಗಲ್ಲಿ ಸಾಕಷ್ಟು ಅನುಮಾನುಗಳು ಕಾದ ತೊಡಗಿದೆ. ಆದ್ರೆ, ಅದ್ಯಾವುದಕ್ಕೂ ಯಾರಿಂದಲೂ ಉತ್ತರವಿಲ್ಲ.
ಯಾರೂ ಯಾಕೆ, ಸ್ವತಃ ಫೋಟೋಗಳನ್ನ ಪೋಸ್ಟ್ ಮಾಡಿದ್ದ ಪವಿತ್ರ ಗೌಡ ಅವರಿಂದಲೇ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ, ಇವರಿಬ್ಬರ ಸ್ನೇಹದ ಬಗ್ಗೆ ಹರಿದಾಡಿದ ಚರ್ಚೆಗಳು ಬರಿ ಚರ್ಚೆಗಳಾಗಿಯೇ ಉಳಿದುಕೊಳ್ಳುತ್ತಿತ್ತು. ಇದೀಗ, ನಟ ದರ್ಶನ್ ಮತ್ತು ಪವಿತ್ರ ಗೌಡ ಅವರ ವಿಷ್ಯದಲ್ಲಿ ಹೊಸದೊಂದು ಬೆಳವಣಿಗೆ ನಡೆದಿದೆ. ದಿಢೀರ್ ಅಂತ ಈ ಬೆಳವಣಿಗೆಯನ್ನ ಗಮನಿಸಿದ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಯಾರ ಬಗ್ಗೆಯೂ ತಲೆಕಡೆಸಿಕೊಳ್ಳದೇ ತನ್ನಿಷ್ಟದಂತೆ ದರ್ಶನ್ ಮತ್ತು ಪವಿತ್ರ ಗೌಡ ಒಟ್ಟಿಗಿರುವ ಕೆಲವು ಫೋಟೋಗಳನ್ನ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಇದೀಗ, ತಮ್ಮ ಅಕೌಂಟ್ ನಲ್ಲಿ ಯಾವ ಫೋಟೋವೂ ಇಲ್ಲ. ಎಲ್ಲವೂ ಡಿಲೀಟ್ ಆಗಿದೆ. ಯಾರು ಡಿಲೀಟ್ ಮಾಡಿದ್ರು.? ಯಾಕೆ ಡಿಲೀಟ್ ಮಾಡಿದ್ರು ಎಂಬ ಅನುಮಾನ ಕಾಡುತ್ತಿದೆ.
Comments