ರಜನಿ 'ಕಾಲಾ' ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ..!

02 Mar 2018 11:56 AM | Entertainment
707 Report

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಲಾ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟ್ಟು ಸಂಚಲನ ಮೂಡಿಸಿದೆ. ಅಲ್ಲದೆ ಅಭಿಮಾನಿಗಳು 'ಕಾಲಾ' ಚಿತ್ರಕ್ಕೆ ಭರ್ಜರಿ ಸ್ವಾಗತ ನೀಡಿದ್ದಾರೆ ಎನ್ನಲಾಗಿದೆ.  ಕಬಾಲಿ ಚಿತ್ರದ ಶೈಲಿಯಲ್ಲೇ ಕಾಲಾ ಕೂಡ ದಕ್ಷಿಣ ಭಾರತ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿಸಿದೆ.

ಕಳೆದ ಫೆಬ್ರವರಿ 28ರಂದೇ ಚಿತ್ರದ ಟೀಸರ್ ಬಿಡುಗಡೆಯಾಗ ಬೇಕಿತ್ತಾದರೂ ಕಂಚಿಮಠದ ಶ್ರೀಗಳಾದ ಜಯೇಂದ್ರ ಸರಸ್ವತಿ ಅವರು ಬ್ರಹ್ಮೈಕ್ಯರಾದ ಹಿನ್ನಲೆಯಲ್ಲಿ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿತ್ತು. ಈ ಬಗ್ಗೆ ರಜನಿಕಾಂತ್ ಆಳಿಯ ಧನುಷ್ ಅವರೂ ಕೂಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅಂತೆಯೇ ಮಾರ್ಚ್ 2ರಂದು ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಅದರಂತೆ ಯೂಟ್ಯೂಬ್ ನಲ್ಲಿ ಇಂದು ಕಾಲಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಚಿತ್ರದ ನಾಯಕ ರಜನಿ ಕಾಂತ್ ಬ್ಲಾಕ್​ ಆಯಂಡ್​ ಬ್ಲಾಕ್​ ಡ್ರೆಸ್​ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್​ ಕೊಡುವಂತ ಡೈಲಾಗ್​ ಇದೆ. ನಾನಾ ಪಾಟೇಕರ್​ ವಿಲನ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ಕಬಾಲಿ ನಿದೇರ್ಶಕ ಪ.ರಂಜಿತ್​ ಕಾಲಾ ಚಿತ್ರಕ್ಕೂ ಆಯಕ್ಷನ್​ ಕಟ್ ಹೇಳಿದ್ದಾರೆ. ರಜನಿಕಾಂತ್ ಅಳಿಯ ಧನುಷ್​ ಅವರ ವುಂಡರ್​ಬಾರ್​ ಫಿಲ್ಮ್​ನಡಿ ಈ ಚಿತ್ರ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

Edited By

Shruthi G

Reported By

Madhu shree

Comments