ಬೆಳ್ಳಿತೆರೆಯಲ್ಲಿ ಬೆಳಗಲು ಹೊರಟಿರುವ ಕಾಮಿಡಿ ಕಿಲಾಡಿ ಹಿತೇಶ್
ಕಾಮಿಡಿ ಕಿಲಾಡಿಗಳು ಮತ್ತು ಕಿಲಾಡಿ ಕುಟುಂಬ ಮೂಲಕ ಎಲ್ಲರ ಮನ ಗೆದ್ದಿದ್ದ ಹಿತೇಶ್ ಕುಮಾರ್ ಕಾಪಿನಡ್ಕ 'ಪ್ಯಾಕು ಪ್ಯಾಕು' ಡೈಲಾಗ್ ಮೂಲಕವೇ ಮನೆ ಮಾತಾದವರು. ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಕಿರಿತೆರೆ ವೀಕ್ಣಕರ ಮನ ಗೆದ್ದಿರುವ ಹಿತೇಶ್ ಇದೀಗ ಏಕಕಾಲದಲ್ಲಿ ಸ್ಯಾಂಡಲ್ವುಡ್ ಮತ್ತು ಕೋಸ್ಟಲ್ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗೋವಿಂದೇಗೌಡ ನಿರ್ದೇಶನದ 'ಜಂತರ್ ಮಂತರ್' ನಲ್ಲಿ ಹಿತೇಶ್ ನಟಿಸಿದ್ದಾರೆ. ಮಾತ್ರವಲ್ಲ ಮೂಡಬಿದ್ರೆ ಕಿಶೋರ್ ನಿರ್ದೇಶನದ ತುಳು ಚಿತ್ರ 'ಅಪ್ಪೆ ಟೀಚರ್' ನಲ್ಲಿ ಕಾಮಿಡಿ ಪಾತ್ರಕ್ಕೆ ಹಿತೇಶ್ ಜೀವ ತುಂಬಿದ್ದಾರೆ. ಕಾಮಿಡಿ ಜೊತೆಗೆ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ಕೋಸ್ಟಲ್ವುಡ್ನ ದಿಗ್ಗಜರ ಜತೆ ಹಿತೇಶ್ ತೆರೆಯನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ 'ಮೈ ನೇಮ್ ಈಸ್ ಅಣ್ಣಪ್ಪ'ಎನ್ನುವ ತುಳು ಚಿತ್ರದಲ್ಲಿಯು ಅಭಿನಯಿಸುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ.
Comments