ಅಣ್ಣಾವ್ರ ಹುಟ್ಟು ಹಬ್ಬಕ್ಕೆ ಶಿವಣ್ಣನಿಂದ ಭರ್ಜರಿ ಗಿಫ್ಟ್...!
ಇತ್ತೀಚಿಗೆ ತೆರೆ ಕಂಡ 'ಟಗರು' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸದ್ಯ 'ಕವಚ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.ಸದ್ಯ ಅನೌನ್ಸ್ ಆಗಿರುವ ಸಿನಿಮಾಗಳನ್ನ ಬಿಟ್ಟು ಹ್ಯಾಟ್ರಿಕ್ ಹೀರೋ ಮತ್ಯಾವ ಸಿನಿಮಾ ಮಾಡ್ತಿದಾರೆ ಎಂದು ಅಭಿಮಾನಿಗಳು ಕುತೂಹಲಕ್ಕೀಡಾಗಿದ್ದರೆ. 'ರುಸ್ತುಂ' ಎಂಬ ಚಿತ್ರವನ್ನು ಅಪ್ಪಾಜಿಯ ಹುಟ್ಟು ಹಬ್ಬದಂದು ಅವರಿಗೆ ಉಡುಗರೆ ಎಂಬಂತೆ ಅವರ ಅಭಿಮಾನಿಗಳಿಗೆ ಅರ್ಪಿಸಲಿದ್ದಾರೆ.
ಅಣ್ಣಾವ್ರ ಹುಟ್ಟು ಹಬ್ಬದಂದೇ ಈ ಸಿನಿಮಾ ಸೆಟ್ಟೇರಲಿದೆ ಸಾಕಷ್ಟು ದಿನಗಳಿಂದ ಸಾಹಸ ನಿರ್ದೇಶಕ ರವಿವರ್ಮಾ ಶಿಣ್ಣನ ಸಿನಿಮಾ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಇತ್ತು. ಈಗ ಅದೇ ಸಿನಿಮಾಗೆ ಚಾಲನೆ ಸಿಕ್ತಿದೆ. ಈ ವಿಚಾರವನ್ನ ಖುದ್ದು ರವಿವರ್ಮಾ ಅವರೇ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಶಿವಣ್ಣನ ಜೊತೆ ಇರುವ ಫೋಟೋ ಹಾಕಿರುವ ನಿರ್ದೇಶಕ ರವಿವರ್ಮಾ ಶಿವಣ್ಣನ ಜೊತೆ ಕೆಲಸ ಮಾಡಲು ಕಾತುರನಾಗಿದ್ದೇನೆ. ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಚಿತ್ರ ಮುಹೂರ್ತ ಆಗಲಿದೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಶಿವಣ್ಣ ಹಾಗೂ ರವಿವರ್ಮಾ ಕಾಂಬಿನೇಷನ್ ಸಿನಿಮಾವನ್ನ ಜಯಣ್ಣ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಚಿತ್ರಕ್ಕೆ ಯಾರು ಬಂಡವಾಳ ಹಾಕುತ್ತಾರೆ ಎನ್ನುವ ಸುದ್ದಿ ಮಾತ್ರ ನಿರ್ದೇಶಕ ರವಿವರ್ಮಾ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ 'ರುಸ್ತುಂ' ಎಂದು ಹೆಸರಿಡಲಾಗಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿಯೂ ಕೆಲಸ ಮಾಡಿ ಬಂದಿರುವ ರವಿವರ್ಮಾ 'ರುಸ್ತುಂ' ಸಿನಿಮಾಗಾಗಿ ಉತ್ತಮ ಕಥೆಯನ್ನ ಮಾಡಿಕೊಂಡಿದ್ದಾರಂತೆ. ಟೈಟಲ್ ಕೇಳುತ್ತಲೇ ಇದೊಂದು ಉತ್ತಮ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
Comments