ಅಭಿಮಾನಿಗಳ ಬಳಿ ಕೋರಿಕೆಯಿಟ್ಟ ಚಾಲೆಂಜಿಂಗ್ ಸ್ಟಾರ್ ...!!

ಸ್ಟಾರ್ ಅಭಿಮಾನಿಗಳ ನಡುವಿನ ಕೋಳಿ ಜಗಳ ನಡೆಯುತ್ತಲೇ ಇದೆ. ಒಂದು ಹೊಸ ಸಿನಿಮಾ ರಿಲೀಸ್ ಆದ್ರೆ ಅದ್ರಲ್ಲಿರೋ ಡೈಲಾಗ್ ಗೆ ಮತ್ತೊಬ್ಬ ನಟನನ್ನು ನಿಂದಿಸುವುದು ಇವೆಲ್ಲವೂಗಳಿಂದ ಬೇಸತ್ತ ಸ್ಟಾರ್ ಗಳು ಸ್ವತಃ ಮನವಿ ಮಾಡಿಕೊಳ್ಳುತ್ತಿದ್ದಾರೆ. ಹೌದು ದರ್ಶನ್ ರವರು ಅಭಿಮಾನಿಗಳಿಗೆ ಈ ವಿಷಯವಾಗಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ದರ್ಶನ್ ಅಭಿಮಾನಿ ನಟ ಯಶ್ ಭಾವಚಿತ್ರಗಳನ್ನ ಬಳಸಿ ಅಸಹ್ಯವಾಗುವಂತಹ ರೀತಿಯಲ್ಲಿ ಟ್ರೋಲ್ ಮಾಡಿ ಫೇಸ್ ಬುಕ್ ನಲ್ಲಿ ಅಪ್ಡೇಟ್ ಮಾಡಿದ್ದರು. ಯಶ್ ಅಭಿಮಾನಿಗಳು ಕೂಡ ನಾವು ಕಮ್ಮಿ ಇಲ್ಲ ಎನ್ನುವ ಹಾಗೇ ದರ್ಶನ್ ಅವರ ಫೋಟೋಗಳನ್ನ ಬಳಸಿಕೊಂಡು ಟ್ರೋಲ್ ಮಾಡಿದ್ದರು. .ಈ ವಿಚಾರ ಅತಿಯಾಗಿ ಮಾಧ್ಯಮಗಳಲ್ಲಿ ಸುದ್ದಿ ಕೂಡ ಆಗಿತ್ತು.ಈ ಕಾರಣಕ್ಕಾಗಿ ದರ್ಶನ್ ರವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ನನ್ನ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ. ಫೇಸ್ಬುಕ್, ಟ್ವಿಟ್ಟರ್ ಗಳಲ್ಲಿ ಬೇರೆ ಸಹನಟರನ್ನು ನಿಂದಿಸಿ ಮಾತನಾಡುವುದು ಇವು ಯಾವುದು ಒಳಿತಲ್ಲ. ನನ್ನ ನಿಜವಾದ ಅಭಿಮಾನಗಳಾಗಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಯಾರಾದರೂ ಅಂತ ಕೆಲಸಗಳಲ್ಲಿ ಭಾಗವಹಿಸಿದರೆ ನನಗೆ ನೋವಾಗುವುದಂತು ನಿಜ. ಸ್ಟಾರ್ ನಟರ ಹೆಸರಿನಲ್ಲಿ ಅಭಿಮಾನಿಗಳು ಎಂದು ಹೇಳಿಕೊಂಡು ಮತ್ತೊಬ್ಬ ನಟರನ್ನ ನಿಂದಿಸುತ್ತಾ ಸ್ಟಾರ್ ಗಳ ಹೆಸರಿಗೆ ಕಳಂಕ ತರುವಂತಹ ಕೆಲಸವನ್ನ ಕೆಲ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಎಂದು ದರ್ಶನ ರವರು ಈ ಹಿಂದೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಮೆಸೇಜ್ ಅನ್ನು ಡಿ ಕಂಪನಿಯ ಸದಸ್ಯರು ಮತ್ತೆ ರೀ ಪೋಸ್ಟ್ ಮಾಡಿದ್ದಾರೆ.
Comments