ಬಿಗ್'ಬಾಸ್ - 5 ನ ಬೆಡಗಿ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ



ಬಿಗ್ ಬಾಸ್ ನಲ್ಲಿ ತನ್ನ ಕನ್ನಡಯನ್ನು ತನ್ನದೇ ಆದ ಸ್ಟೈಲ್ ನಲ್ಲಿ ಮುದ್ದು ಮುದ್ದಾಗಿ ಮಾತನಾಡಿ ಎಲ್ಲರ ಮನಸೆಳೆದಿದ್ದ ಶ್ರುತಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ? ಹೇಳಿ ಮುಂಬೈ ನಲ್ಲಿ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಈ ಬೆಡಗಿ ನಟನೆ ಮಾತ್ರವಲ್ಲದೆ, ಇಂಪಾಗಿ ಹಾಡಬಲ್ಲರು ಕೂಡ. ಇದೀಗ ಈ ಬೆಡಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಜ್ ಸೂರ್ಯ ನಿರ್ದೇಶನದ 'ಲಂಡನ್ ನಲ್ಲಿ ಲಂಬೋದರ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದೇ ವೇಳೆ ಶ್ರುತಿ ಹಿನ್ನೆಲೆ ಗಾಯಕಿ ಆಗಿಯೂ ಕನ್ನಡ ಚಿತ್ರೋದ್ಯಮದಲ್ಲಿ ತಮ್ಮ ಕೆರಿಯರ್ ಶುರು ಮಾಡಿದ್ದಾರೆ. ನಟನೆ, ಗಾಯನ ಒಟ್ಟಿಗೆ ಎರಡು ದೋಣಿಯ ಜರ್ನಿ ಅವರದು. ಇದರಬಗ್ಗೆ ಮಾತನಾಡಿದ ಶ್ರುತಿ ಪ್ರಕಾಶ್ ಹೌದು. ಒಂದೊಳ್ಳೆ ಕತೆ, ಪಾತ್ರವೂ ಚೆನ್ನಾಗಿದೆ. ನಿರ್ದೇಶಕ ರಾಜ್ ಸೂರ್ಯ ಬಂದು ಕತೆ ಹೇಳಿ ತಾವೇ ಈ ಚಿತ್ರದ ನಾಯಕಿ ಆಗಬೇಕು ಅಂದ್ರು. ಪಾತ್ರದ ಮಾಹಿತಿ ಪಡೆದುಕೊಂಡೆ, ಅನಂತರ ಓಕೆ ಹೇಳಿದೆ. ಪಾತ್ರದ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಇಷ್ಟಪಡೋದಿಲ್ಲ. ಇನ್ನು ಸಿನಿಮಾ ಶುರುವಾಗಿಲ್ಲ, ಆಗಲೇ ಚಿತ್ರದಲ್ಲಿನ ನನ್ನ ಪಾತ್ರ ಎಂಥದ್ದು ಅಂತ ಹೇಳಿಕೊಳ್ಳುವುದು ನನಗೂ ಇಷ್ಟ ಆಗೋದಿಲ್ಲ. ಹಾಗಂತ ಇದು ನಿರ್ದೇಶಕರ ಸೂಚನೆ ಅಂತಲ್ಲ. ಸದ್ಯಕ್ಕೆ ಅದೇನು ಅಂತ ರಿವೀಲ್ ಮಾಡೋದಿಲ್ಲ. ಅಧಿಕೃತವಾಗಿ ಒಂದು. ಅದು ನಟಿಯಾಗಿ. ಇನ್ನು ನಿರ್ದೇಶಕ ದಯಾಳ್ ಸರ್ ನಿರ್ದೇಶನದ ಕರಾಳ ರಾತ್ರಿಯಲ್ಲಿ ಒಂದು ಸಾಂಗ್ ಹಾಡುತ್ತಿದ್ದೇನೆ. ಒಂದೆರೆಡು ಪ್ರಾಜೆಕ್ಟ್ ಮಾತುಕತೆ ಹಂತದಲ್ಲಿವೆ ಎಂದರು.
Comments