ಕಿಚ್ಚ ಸುದೀಪ್ ಅಭಿಮಾನಿಗಳು ವರ್ಷವಿಡಿ ಹಬ್ಬ ಆಚರಿಸೋದು ಗ್ಯಾರಂಟಿ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಅಭಿಮಾನಿಗಳು ವರ್ಷವಿಡಿ ಹಬ್ಬ ಮಾಡೋದ್ರಲ್ಲಿ ಎರಡು ಮತ್ತಿಲ್ಲ. ಇದೇನಪ್ಪ ಕಿಚ್ಚನ ಅಭಿಮಾನಿಗಳು ಹಬ್ಬ ಮಾಡ್ತಾರೆ ಅಂತೀರಾ ಹೌದು ಈ ವರ್ಷ ಸುದೀಪ್ ಅಭಿನಯದ 3 ಚಿತ್ರಗಳು ತೆರೆ ಕಾಣುವ ಸಾಧ್ಯತೆ ಇದ್ದು, ವರ್ಷಪೂರ್ತಿ ಅವರ ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿಯಾಗಿದೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರೊಂದಿಗೆ ಸುದೀಪ್ ಅಭಿನಯಿಸಿರುವ 'ದಿ ವಿಲನ್' ಬಿಡುಗಡೆಗೆ ಸಿದ್ಧವಾಗ್ತಿದೆ. ಇದರೊಂದಿಗೆ 'ಹೆಬ್ಬುಲಿ' ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಪೈಲ್ವಾನ್ ಮತ್ತು ಬಾಕ್ಸರ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ.ಇನ್ನು 'ಕೋಟಿಗೊಬ್ಬ -3' ರಿಲೀಸ್ ಡೇಟ್ ಈಗಾಗಲೇ ಅನೌನ್ಸ್ ಮಾಡಲಾಗಿದೆ. ಡಿಸೆಂಬರ್ ನಲ್ಲಿ ಕ್ರಿಸ್ ಮಸ್ ವೇಳೆಗೆ ಈ ಚಿತ್ರ ರಿಲೀಸ್ ಆಗಲಿದೆ. 'ದಿ ವಿಲನ್', 'ಪೈಲ್ವಾನ್', 'ಕೋಟಿಗೊಬ್ಬ -3' ಚಿತ್ರಗಳನ್ನು ಈ ವರ್ಷ ಕಣ್ತುಂಬಿಕೊಳ್ಳಬಹುದಾಗಿದೆ. ಇನ್ನು ತೆಲುಗು, ತಮಿಳು ಹಾಗೂ ಹಾಲಿವುಡ್ ಚಿತ್ರದಲ್ಲಿಯೂ ಸುದೀಪ್ ಅಭಿನಯಿಸಲಿದ್ದಾರೆ. ಹಾಗಾಗಿ ಸುದೀಪ್ ಅಭಿಮಾನಿಗಳಿಗೆ ಈ ವರ್ಷವಿಡಿ ಹಬ್ಬ ಗ್ಯಾರಂಟಿಯಾಗಿದೆ.
Comments