ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ...!!

ಅಂಜನಿ ಪುತ್ರದ ನಂತರ ಪುನೀತ್ ರಾಜ್ ರವರು ಯಾವ ಸಿನಿಮಾ ಮಾಡ್ತಿದ್ದಾರೆಂದು ಅಪ್ಪು ಅಭಿಮಾನಿಗಳಲ್ಲಿ ಈ ಒಂದು ಪ್ರಶ್ನೆ ಮೂಡಿರುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. ಪುನೀತ್ ರಾಜಕುಮಾರ್ ಹಾಗು ಪವನ್ ಒಡೆಯರ್ ನಿರ್ದೇಶನದಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.
ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಬರುತ್ತಿರುವ ಪುನೀತ್ ರಾಜಕುಮಾರ್ ರವರ ಈ ಸಿನಿಮಾಕ್ಕೆ ಪಂಜು' ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಇದೆ. ಈ ಸಿನಿಮಾ ವಿಶೇಷತೆ ಏನೆಂದರೆ ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಚಿತ್ರಕ್ಕೆ 'ಪಂಜು' ಎನ್ನುವ ಪಂಚಿಂಗ್ ಹೆಸರನ್ನು ಇಡಲಾಗಿದೆಯಂತೆ. 'ಪಂಜು' ಸಿನಿಮಾದ ಚಿತ್ರೀಕರಣ ಮಾರ್ಚ್ 8 ರಿಂದ ಶುರು ಆಗಲಿದೆ. ಇನ್ನೂ ಸಿನಿಮಾದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರಕ್ಕೆ ಡಿ ಇಮ್ಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. 'ರಣವಿಕ್ರಮ' ನಂತರ ಮತ್ತೆ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿ ಒಂದಾಗಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ
Comments