ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೆಟ್ಟೇರಲಿದೆ 'ಆಪ್ತಮಿತ್ರ-2 ' ಸಿನಿಮಾ..!

ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ 'ಆಪ್ತಮಿತ್ರ ' ಸಿನಿಮಾ ಎಂದೊಡನೆ ವಿಷ್ಣುವರ್ಧನ್ ಹಾಗು ಸೌಂದರ್ಯರವರನ್ನು ನೆನೆಪಿಸಿಕೊಳ್ಳುತ್ತೇವೆ. ಮತ್ತೆ 'ಆಪ್ತಮಿತ್ರ ' ಸಿನಿಮಾನಾ ಅಂತ ಅಚ್ಚರಿ ಪಡಬೇಡಿ ಇದು 'ಆಪ್ತಮಿತ್ರ-2 ' ಈ ಚಿತ್ರದಲ್ಲಿ ಬಹಳ ವಿಶೇಷಗಳಿವೆಯಂತೆ ಅದರ ಬಗ್ಗೆ ನೀವೇ ನೋಡಿ ..!
ಹೌದು, ಸ್ಯಾಂಡಲ್ ವುಡ್ ನಲ್ಲಿ 'ಆಪ್ತಮಿತ್ರ 2' ಸಿನಿಮಾ ಬರಲಿದೆಯಂತೆ. 'ಆಪ್ತಮಿತ್ರ' ನಂತರ 'ಆಪ್ತರಕ್ಷಕ' ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ.ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಸಿನಿಮಾಗೆ ನಾಯಕ ಎನ್ನುವ ಸುದ್ದಿ ಕೂಡ ಈಗ ಹರಿದಾಡ್ತಿದೆ. ಆಪ್ತಮಿತ್ರ' ಚಿತ್ರವನ್ನು ನಿರ್ದೇಶಕ ಮಾಡಿದ್ದ ಪಿ.ವಾಸು ಅವರೇ ಈಗ 'ಆಪ್ತಮಿತ್ರ 2' ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಂತೆ. 'ಶಿವಲಿಂಗ' ನಂತರ 'ಆಪ್ತಮಿತ್ರ 2' ಸಿನಿಮಾ ಮಾಡಲಿದ್ದಾರೆ, ಆಪ್ತಮಿತ್ರ' ಸಿನಿಮಾದಲ್ಲಿ ವಿಷ್ಣುವರ್ಧನ್ ನಾಯಕನಾಗಿದ್ದರು. ಆದರೆ 'ಆಪ್ತಮಿತ್ರ 2' ಚಿತ್ರಕ್ಕೆ ನಟ ರವಿಚಂದ್ರನ್ ನಾಯಕ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ. ಆಪ್ತಮಿತ್ರ 2' ಸಿನಿಮಾದಲ್ಲಿ ರವಿಚಂದ್ರನ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ರವಿಚಂದ್ರನ್ ಅವರಿಗೂ ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟವಾಗಿದೆಯಂತೆ. ಆದರೆ ಇನ್ನೂ ಫೈನಲ್ ಆಗಿಲ್ಲ.
Comments