ಶ್ರೀದೇವಿ-ದಿವ್ಯಾ ಭಾರತಿ ನಡುವಿದ್ದ ನಂಟೇನು ?

ನಟಿ ಶ್ರೀದೇವಿಯ ಅಕಾಲಿಕ ಮರಣದಿಂದ ಶ್ರೀದೇವಿಯವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೆ ಈ ಹಿಂದೆ ಶ್ರೀದೇವಿಯವರನ್ನು ಹೋಲುವ ಮತ್ತೊಬ್ಬ ನಟಿ ಇದ್ದಳೆಂಬುದು ನಿಮಗೆ ಗೊತ್ತಾ? ಹೌದು ಆಕೆ ದಿವ್ಯಾ ಭಾರತಿದಿತ್ತು ಶ್ರೀದೇವೆಯವರನ್ನು ಹೋಲುತ್ತಿದ್ದಳಂತೆ ಈ ನಟಿ.
ಶ್ರೀದೇವಿ ಸ್ಥಾನಕ್ಕೆ ದಿವ್ಯಾ ಭಾರತಿ ಬರ್ತಾಳೆ ಅನ್ನೋ ಅಭಿಪ್ರಾಯವೂ 90ರ ದಶಕದಲ್ಲಿ ಚಿತ್ರರಂಗದಲ್ಲಿ ವ್ಯಕ್ತವಾಗಿತ್ತು. ಆದರೆ ವಿಧಿಯ ಆಟವೇ ಬೇರೆ ಇತ್ತು ನಿಗೂಢವಾಗಿ ಸಾವನ್ನಪ್ಪಿದ್ದ ದಿವ್ಯಾ ಭಾರತಿ. ಯಾಕಂದ್ರೆ ದಿವ್ಯಾ ಭಾರತಿ ಹಾಗೂ ಶ್ರೀದೇವಿ ನೋಡಲು ಬಹುತೇಕ ಒಂದೇ ತೆರನಾಗಿದ್ರು. ದಿವ್ಯಾ ಭಾರತಿಯನ್ನು ಶ್ರೀದೇವಿಯ ತಂಗಿ ಎನ್ನಲಾಗ್ತಿತ್ತು. ಆದ್ರೆ ದಿವ್ಯಾ ಕೂಡ ಚಿಕ್ಕ ವಯಸ್ಸಿನಲ್ಲೇ ದುರಂತ ಸಾವು ಕಂಡಿದ್ದಳು. 1993ರ ಎಪ್ರಿಲ್ 5ರಂದು ಕುಡಿದ ಮತ್ತಿನಲ್ಲಿ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ಲು. ಆ ಸಮಯದಲ್ಲಿ ದಿವ್ಯಾ ಭಾರತಿ ಲಾಡ್ಲಾ ಚಿತ್ರದಲ್ಲಿ ನಟಿಸುತ್ತಿದ್ಲು. ಆಕೆಯ ಹಠಾತ್ ನಿಧನದಿಂದ ಚಿತ್ರ ಅರ್ಧಕ್ಕೇ ಸ್ಥಗಿತಗೊಂಡಿತ್ತು. ನಂತರ ನಿರ್ದೇಶಕರು ಆ ಜಾಗಕ್ಕೆ ಶ್ರೀದೇವಿಯನ್ನು ಹಾಕಿಕೊಂಡು ಶೂಟಿಂಗ್ ಪೂರ್ಣಗೊಳಿಸಿದ್ದರು. ಶ್ರೀದೇವಿ ಸಾವನ್ನಪ್ಪಿರೋದು ಫೆಬ್ರವರಿ 24ಕ್ಕೆ. ದಿವ್ಯಾ ಭಾರತಿಯ ಜನ್ಮದಿನ ಫೆಬ್ರವರಿ 25. ಹಾಗಾಗಿ ಇದರಲ್ಲೂ ಶ್ರೀದೇವಿ ಹಾಗೂ ದಿವ್ಯಾಗೆ ಒಂದು ರೀತಿಯ ನಂಟಿದೆ.
Comments