ಟಗರು ಚಿತ್ರದ ವಿರುದ್ಧ ಸಿಟ್ಟಿಗೆದ್ದ ಸೆಂಚುರಿ ಸ್ಟಾರ್ ಅಭಿಮಾನಿಗಳು

ಸೂರಿ ಡೈರೆಕ್ಷನ್ ಗೆ ಫಿಧಾ ಆದ ಶಿವಣ್ಣನ ಅಭಿಮಾನಿಗಳು. ಮತ್ತೊಮ್ಮೆಸೂರಿಯನ್ನು ಯಶಸ್ಸಿನತ್ತ ಕರೆದು ಕೊಂಡು ಹೋಗುತ್ತಿರುವ ಟಗರಿನ ಪೊಗರಿಗೆ ಪ್ರೇಕ್ಷಕರು ಮಾತ್ರ ಫಿದಾ ಆಗಿರುವುದರಲ್ಲಿ ಎರಡು ಮಾತ್ತಿಲ್ಲ. ಆದ್ರೆ ಕೆಲ ಶಿವಣ್ಣನ ಅಭಿಮಾನಿಗಳು ಟ್ಯಾಗೂರು ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಟಗರು ಚಿತ್ರದಲ್ಲಿ ಶಿವಣ್ಣನನ್ನು ನಿಂದಿಸಲಾಗಿದೆ ಎಂಬ ಧೋರಣೆಯ ಮೇರೆಗೆ ನಿರ್ದೇಶಕ ಸೂರಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಟಗರು ಚಿತ್ರದ ವಿರುದ್ದ ಶಿವರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕೆ ಧನಂಜಯ್ ಪಾತ್ರ ಕೆಟ್ಟದಾಗಿ ಡೈಲಾಗ್ ಹೊಡೆಯುತ್ತದೆ ಎಂದು ಶಿವಣ್ಣ ಅಭಿಮಾನಿಗಳು ಸಿಟ್ಟಾಗಿದ್ದಾರೆ. ನಿರ್ದೇಶಕ ಸೂರಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸೂರಿ ಮುಖಕ್ಕೆ ಮಸಿ ಬಳೆಯೋ ಎಚ್ಚರಿಕೆ ನೀಡಿದ್ದಾರೆ ಅಖಿಲ ಕರ್ನಾಟಕ ಡಾ ಶಿವರಾಜ್ ಕುಮಾರ್ ಸೇನಾ ಸಮಿತಿ.
Comments