ಸಲ್ಮಾನ್ ಇನ್ನು ಯಾಕೆ ಮದುವೆಯಾಗಿಲ್ಲ ಗೊತ್ತಾ ?
52ರ ಹರೆಯದ ಬಾಲಿವುಡ್ ಸುಲ್ತಾನ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಎಲ್ಲರಿಗೂ ತಿಳಿದಿರುವ ಹಾಗೆ ಸೂಪರ್ ರಿಚ್, ಸೂಪರ್ ಪವರ್ ಫುಲ್, ಸೂಪರ್ ಬಾಕ್ಸ್ ಆಫೀಸ್ ಕಿಂಗ್, ಅಸಂಖ್ಯ ಹುಡುಗಿಯರ ಕಣ್ಮಣಿ.
ಅದೆಲ್ಲ ಸರಿ; ಆದರೆ ಸಲ್ಮಾನ್ ಇನ್ನೂ ಅವಿವಾಹಿತ ! ಆತ ಎಲ್ಲೇ ಹೋಗಲಿ, ಯಾವುದೇ ಸಮಾರಂಭದಲ್ಲಿ ಹಾಜರಿರಲಿ - ಪತ್ರಕರ್ತರು, ಅಭಿಮಾನಿಗಳು ಆತನಿಗೆ ಕೇಳುವ ಪ್ರಶ್ನೆ ಒಂದೇ : ನೀವಿನ್ನು ಯಾಕೆ ಮದುವೆ ಆಗಿಲ್ಲ; ಆಗೋದು ಯಾವಾಗ ? ನಟ ಸಲ್ಮಾನ್ ಖಾನ್ಗೆ ಈ ಪ್ರಶ್ನೆಯನ್ನು ಎದುರಿಸಿ ಎದುರಿಸಿ ಸಾಕಾಗಿ ಹೋಗಿದೆ; ಏನೇ ಕಾರಣ ಕೊಟ್ಟರೂ ಅದರಿಂದ ಯಾರಿಗೂ ಸಮಾಧಾನ ಇಲ್ಲ. ಹಾಗಂತ ಈ ಪ್ರಶ್ನೆ ಕೇಳುವವರು ಸಲ್ಲುವನ್ನು ಸಮಾಧಾನದಿಂದ ಇರಲು ಬಿಡುವುದಿಲ್ಲ ! ಮೊನ್ನೆ ಮೊನ್ನೆ ಸಲ್ಮಾನ್ ಖಾನ್ಗೆ ಪುನಃ ಇದೇ ಪ್ರಶ್ನೆಯನ್ನು ಕೇಳಲಾಯಿತು. ಆದಕ್ಕಾತ ಏನು ಉತ್ತರ ಕೊಟ್ಟ ಗೊತ್ತಾ ? "ಮದುವೆ ಎಂದರೆ ಇವತ್ತು ಭಾರೀ ದೊಡ್ಡ ಸಮಾರಂಭ; ಮದುವೆಗೆಂದು ಲಕ್ಷ ಲಕ್ಷ ಕೋಟಿಗಟ್ಟಲೆ ಸುರಿಯುತ್ತಾರೆ; ಅಷ್ಟು ಹಣನನ್ನ ಬಳಿ ಇಲ್ಲ; ಅದೇ ಕಾರಣಕ್ಕೆ ನಾನು ಈ ತನಕ ಮದುವೆಯಾಗಿಲ್ಲ !' ಸಲ್ಲು ನೀಡಿರುವ ಹಾರಿಕೆ ಉತ್ತರ ಅದೇನೇ ಇರಲಿ; ಅಂತೂ ಆತನಿಗೆ 52 ಆಗಿದೆ; ಆದರೂ ಆತ ಬಾಲಿವುಡ್ನ ಎಲಿಜಿಬಲ್ ಬ್ಯಾಚುಲರ್ ! ಆತನಿಗೆ ಇನ್ಯಾವಾಗ ಮದುವೆ ? ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
Comments