ಆರೆಂಜ್ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಗೋಲ್ಡನ್ ಸ್ಟಾರ್

ಇತ್ತೀಚಿಗೆ ಬಿಡುಗಡೆಯಾದ ಚಮಕ್ ಚಿತ್ರದ ಮೂಲಕ ಟ್ರೆಂಡ್ ಕ್ರೀಟ್ ಮಾಡಿರುವ ಮುಂಗಾರುಮಳೆ ನಾಯಕ ಗೋಲ್ಡನ್ ಸ್ಟಾರ್ ಗಣೇಶ್. ತಮ್ಮ ಮುಂದಿನ ಆರೆಂಜ್ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಆರೆಂಜ್ ಚಿತ್ರದ ಶೂಟಿಂಗ್ ನಲ್ಲಿ ಬಿಝಿಯಾಗಿದ್ದಾರೆ.
ಪ್ರಶಾಂತ್ ರಾಜ್ ನಿರ್ದೇಶನದ ಆರೆಂಜ್ ಚಿತ್ರದಲ್ಲಿ ಗಣೇಶ್ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರಬಿದ್ದಿದ್ದು, ಚಿತ್ರದಲ್ಲಿ ತಾವು ಕಾಣಿಸುವ ಬಗೆಯನ್ನು ಖುದ್ದು ಗಣೇಶ್ ಅವರೇ ಟ್ವೀಟರ್ ನಲ್ಲಿ ಹಾಕಿಕೊಂಡಿದ್ದಾರೆ. ಮುಗುಳು ನಗೆ, ಚಮಕ್ ಸಿನಿಮಾಗಳಲ್ಲಿ ವಿಭಿನ್ನ ಲುಕ್ ನಿಂದಲೇ ಗಣೇಶ್ ಎಲ್ಲರ ಗಮನಸೆಳೆದಿದ್ದರು. ಇದೀಗ ಆರೆಂಜ್ ನಲ್ಲೂ ಹೊಸ ಗೆಟಪ್ ಹಾಕಿದ್ದಾರೆ. ಫೆ. 11 ರಿಂದ ಅರೆಂಜ್ ಚಿತ್ರದ ಶೂಟಿಂಗ್ ಶುರುವಾಗಿದೆ.
Comments