ಕಾರು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ರಣವೀರ್

ಚಾಲಕನ ನಿಯಂತ್ರಣ ತಪ್ಪಿ ಕಾರು ಗೋಡೆಗೆ ಗುದ್ದಿದೆ. ಹಿಂದೆ ಬರ್ತಿದ್ದ ಇನ್ನೊಂದು ಕಾರು ರಣವೀರ್ ಕಾರಿಗೆ ಗುದ್ದಿದೆ. ಅದೃಷ್ಟವಶಾತ್ ರಣವೀರ್ ಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ. ಬಾಲಿವುಡ್ ಅಲ್ಲಾಹುದ್ದೀನ್ ಖಿಲ್ಜಿ ರಣವೀರ್ ಸಿಂಗ್ ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಮಾಹಿತಿ ಪ್ರಕಾರ ರಣವೀರ್ ಚಾಲಕನ ಜೊತೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ರಣವೀರ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ನಂತ್ರ ನಟಿ ದೀಪಿಕಾ ಪಡುಕೋಣೆ ತೆಗೆದುಕೊಂಡ ನಿರ್ಧಾರ ಆಶ್ಚರ್ಯ ಹುಟ್ಟಿಸುವಂತಿದೆ. ರಣವೀರ್ ಕಾರು ಅಪಘಾತದ ಸುದ್ದಿ ದೀಪಿಕಾಗೆ ತಿಳಿಯುತ್ತಿದ್ದಂತೆ ದೀಪಿಕಾ ಕಾರು ಚಾಲಕನನ್ನು ಕೆಲಸದಿಂದ ತೆಗೆದು ಹಾಕಿದ್ದಾರಂತೆ. ಚಾಲಕನಿಗೆ ಬೈದ ದೀಪಿಕಾ, ಘಟನೆಯಲ್ಲಿ ರಣವೀರ್ ಗೆ ದೊಡ್ಡ ಗಾಯಗಳಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಏನೂ ಆಗಿಲ್ಲ ಎಂದಿದ್ದಾರಂತೆ. ಈ ಹಿಂದೆ ಕೂಡ ಇದೇ ಚಾಲಕ ದೀಪಿಕಾ ಕಾರು ಚಲಾಯಿಸುತ್ತಿದ್ದ. ಆಗ್ಲೂ ಅಪಘಾತವಾಗಿತ್ತು.
Comments