ಚಂದನ್ ಶೆಟ್ಟಿ ಹಾಗು ನಿವೇದಿತಾ ಮದುವೆ ಬಗ್ಗೆ ಬಾಯಿಬಿಟ್ಟ ಈ ಜೋಡಿ ..!

24 Feb 2018 3:08 PM | Entertainment
801 Report

ಬಿಗ್ ಬಾಸ್ 5 ನಲ್ಲಿ ಸ್ಪರ್ಧಿಗಳಾಗಿದ್ದ ನಿವೇದಿತಾ ಹಾಗು ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿರುವವರೆಗೂ ಸಹ ಉತ್ತಮ ಗೆಳೆತನ ಬೆಳೆದು ಅದನ್ನು ಬಿಗ್ ಬಾಸ್ ಮುಗಿದ ನಂತರವೂ ಸಹ ಮುಂದುವರೆಸಿಕೊಂಡು ಹೋಗುತ್ತಿದೆ. ಈ ಕ್ಯೂಟ್ ಜೋಡಿ ಮದುವೆಯಾಗಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ.

ಅಭಿಮಾನಿಗಳ ಕನಸ್ಸಿನ ಬಗ್ಗೆ ನಿವೇದಿತಾ ಹಾಗು ಚಂದನ್ ಶೆಟ್ಟಿ ಎಂಹೆಳಿದ್ರು ಗೊತ್ತಾ ..? ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ ಚಂದನ್ ಶೆಟ್ಟಿಯವರು ನಿವೇಧಿತಾ ಮನೆಗೆ ಹೋಗಿ ನಿವೇದಿತಾ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ನಂತರ ಫೇಸ್ ಲೈವ್ ಬಂದಿದ್ದ ಚಂದನ್ ಹಾಗು ನಿವೇದಿತಾರವರು ಬಿಗ್ ಬಾಸ್ ಮನೆ ಅಗ್ನಿ ಅವಘಡಕ್ಕೀಡಾದ ಬಗ್ಗೆ ಇಬ್ಬರು ಬೇಸರ ವ್ಯೆಕ್ತಪಡಿಸಿದರು. ಬಿಗ್ ಬಾಸ್ ಮನೆಯಲ್ಲಿ ನಮ್ಮ ಬಹಳ ನೆನಪುಗಳು ಇದ್ದವು. ಈ ಘಟನೆಯಿಂದ ಬೇಸರ ತರಿಸಿದೆ ಎಂದರು. ಬಿಗ್ ಬಾಸ್  ವಿನ್ನರ್ ಚಂದನ್ ಹಾಗೂ ನಿವೇದಿತಾ ಗೌಡ ಅವರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ, ಮದುವೆ ಕೂಡ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ರೂಮರ್ ಗಳು  ಸತ್ಯಕ್ಕೆ ದೂರವಾದವು ಎಂಬುದು ಈಗಾಗಲೇ ರುಜುವಾತಾಗಿದೆ.ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ನೇರವಾದ ಪ್ರಶ್ನೆ ಮಾಡಿದ್ರು. ಈ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಚಂದನ್‌, ನಾವು ಒಳ್ಳೆಯ, ಸ್ವೀಟ್ ಸ್ನೇಹಿತರು. ಅಂತಹ ಯೋಚನೆಗಳು ನಮ್ಮಲ್ಲಿಲ್ಲ ಎಂದರು.

Edited By

Shruthi G

Reported By

Madhu shree

Comments