ಬಿಗ್ ಬಾಸ್ ಮುಗಿದ್ಮೇಲೆ ದಿವಾಕರ್ ಏನ್ಮಾಡ್ತಿದಾರೆ ಗೊತ್ತಾ..?

ಬಿಗ್ ಬಾಸ್ ಮನೆಯಲ್ಲಿ ಎಲ್ಲ ಕನ್ನಡ ಜನತೆಯ ಮನ ರಂಜಿಸಿದ ದಿವಾಕರ್ .ಬಿಗ್ ಬಾಸ್ ನಿಂದ ಹೊರಬಂದ್ಮೇಲೆ ತನ್ನ ಜೀವನದಲ್ಲೇ ಬೆಳಕು ಮೂಡುವುದು ಎಂದು ಅಂದುಕೊಂಡಿದ್ದ ದಿವಾಕರ್ ಅಂದುಕೊಂಡಿದ್ದು ಯಾವುದು ಸಹ ನಡೆದಿಲ್ಲ. ಸದ್ಯ ಕೈಯಲ್ಲಿರುವುದು ಒಂದು ಪ್ರಾಜೆಕ್ಟ್ ಅಷ್ಟೇ.
ಕೊನೆಗೂ ದಿವಾಕರ್ ಗೆ ಸೇಲ್ಸ್ ಮ್ಯಾನ್ ಕೆಲಸವೇ ಮತ್ತೆ ಕೈಬಿಸಿ ಕರೆದಿದೆ. ಸೇಲ್ಸ್ ಮ್ಯಾನ್ ಕೆಲಸದಿಂದಲೇ ಇದು ದಿವಾಕರ್ ರವರ ಕುಟುಂಬ ಜೀವನ ಸಾಗಿಸುತ್ತಿದೆ. ತಾವು ಬಿಗ್ ಬಾಸ್ ನಿಂದ ಬಂದಮೇಲೆ ತಮ್ಮ ಹೆಂಡತಿ ಮಗುವನ್ನು ಚನ್ನಾಗಿ ನೋಡಿಕೊಳ್ಳಬಹುದು ಎಂದು ಕಾಣಸು ಕಾಣುತ್ತಿದ್ದ ದಿವಾಕರ್ ರವರ ಜೇವನದಲ್ಲಿ ಯಾವುದೇ ಬದಲಾವಣೆಗಳು ಕಂಡಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವಾಕರ್ ಕೈ ಸೇರಿದ್ದ ಮೂರು ಮತ್ತೊಂದಿಷ್ಟು ಹಣ. ಯಾರನ್ನೋ ಹುಡುಕಿಕೊಂಡು ಕೆಲಸ ಕೊಡಿ ಎಂದು ಕೇಳುವ ಮನಸ್ಸು ದಿವಾಕರ್ ಗೆ ಇಲ್ಲ. ಆದರೆ ಒಂದಲ್ಲ ಒಂದು ದಿನ ಒಳ್ಳೆಯದಾಗುತ್ತೆ ಎನ್ನುವ ಭರವಸೆ ದಿವಾಕರ್ ಗೆ ಇದೆ.
Comments