ಜಬರ್ದಸ್ತಾಗಿದೆ ಟಗರಿನ ಪೊಗರು..!

ಟಗರಿನ ಪೊಗರು ಕಂಡು ಪ್ರೇಕ್ಷಕರು ಟಗರಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಸೂರಿ ಡೈರೆಕ್ಷನ್ ಗೆ ಫಿಧಾ ಆದ ಶಿವಣ್ಣ ನ ಅಭಿಮಾನಿಗಳು. ಮತ್ತೊಮ್ಮೆಸೂರಿ ಯನ್ನು ಯಶಸ್ಸಿನತ್ತ ಕರೆದು ಕೊಂಡು ಹೋಗುತ್ತಿರುವ ಟಗರಿನ ಪೊಗರಿಗೆ ಪ್ರೇಕ್ಷಕರು ಮಾತ್ರ ಫಿದಾ ಆಗಿರುವುದರಲ್ಲಿ ಎರಡು ಮಾತ್ತಿಲ್ಲ.
''ಸೂರಿ ಮೇಕಿಂಗ್ ನಲ್ಲಿ ಕಿಂಗ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಅವರು ಕಂಪೋಸ್ ಮಾಡಿರುವ ಒಂದೊಂದು ಶಾಟ್ ಗಳೂ ತೆರೆ ಮೇಲೆ ಸೊಗಸಾಗಿ ಕಾಣುತ್ತವೆ. ಟಗರು ಶಿವ, ಡಾಲಿ, ಕಾಕ್ರೋಚ್, ಚಿಟ್ಟೆ, ಬೇಬಿ ಕೃಷ್ಣ, ಅಂಕಲ್ ಎಂದು ಪಾತ್ರಗಳಿಗೆ ಚಿತ್ರ ವಿಚಿತ್ರ ಹೆಸರಿಟ್ಟಿರುವ ಸೂರಿ, ಪಂಚಮಿ, ಪುನರ್ವಸು ಎಂಬ ಸುಂದರ ಹೆಸರುಗಳನ್ನು ನಾಯಕಿಯರಿಗಿಟ್ಟು ಇಷ್ಟವಾಗುತ್ತಾರೆ. ಮೇಕಿಂಗ್ ನ್ನು ಅದ್ಭುತವಾಗಿ ಮಾಡುವ ಸೂರಿ ಪಾತ್ರಗಳನ್ನು ಕ್ರಿಯೇಟ್ ಮಾಡುತ್ತಾರೆ. ಜತೆಗೆ ಅವುಗಳ ಪೋಷಣೆ ಸಹ ಚೆನ್ನಾಗಿ ಮಾಡುತ್ತಾರೆ ಎಂಬುದಕ್ಕೆ ಟಗರು ಮತ್ತೊಮ್ಮೆ ಸಾಕ್ಷೀಭೂತವಾಗಿದೆ. ಚಿತ್ರದ ಪಂಚಿಂಗ್ ಸಂಭಾಷಣೆ, ಸಂಗೀತ, ಸಿನಿಮಾಟೋಗ್ರಪಿ ಚಿತ್ರದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು.
Comments