ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾಮಣಿ



ಚುನಾವಣೆ ಸಮಿಸುತ್ತಿದ್ದಂತೆ ರಾಜಕೀಯಕ್ಕೆ ಅನೇಕ ನಟರು ಎಂಟ್ರಿ ಕೊಡುತ್ತಾರೆ, ಈಗಲೇ ರಿಯಲ್ ಸ್ಟಾರ್ ಉಪೇಂದ್ರರವರು ಇತ್ತೀಚಿಗೆ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ಇದೀಗ ನಟಿ ಪ್ರಿಯಾಮಣಿಯವರು ಸಹ ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು ಜನಶಕ್ತಿ ಎಂಬ ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಅವರು ರಿಯಲ್ ನಲ್ಲಿ ರಾಜಕಾರಣ ಮಾಡುತ್ತಿಲ್ಲ, ರೀಲ್ ನಲ್ಲಿ ರಾಜಕೀಯ ಮಹಿಳೆಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ಮದುವೆಯ ನಂತರ ಪ್ರಿಯಾಮಣಿ ಆಫ್ಟರ್ ಲಾಂಗ್ ಗ್ಯಾಪ್ ನಂತರ ‘ಧ್ವಜ’ ಎಂಬ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಜಕೀಯ ದೃಶ್ಯಗಳನ್ನು ಒಳಗೊಂಡಿದ್ದು, ಚಿತ್ರದಲ್ಲಿ ಜನಶಕ್ತಿ ಎಂಬ ಪಕ್ಷದ ರಾಜಕೀಯ ಮಹಿಳೆಯಾಗಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Comments