ಫಸ್ಟ್ ಡೇ ಶಿವಣ್ಣನ ಟಗರು ಸಿನಿಮಾ ನೋಡೋಕೆ ಕಾಯ್ತಿರೋ ಅಪ್ಪು

ನಟ ಪುನೀತ್ ರಾಜ್ ಕುಮಾರ್ ಕೂಡ ಚಿತ್ರ ನೋಡುವ ತವಕದಲ್ಲಿ ಇದ್ದಾರೆ. ಪುನೀತ್ ರಾಜ್ ಕುಮಾರ್ 'ಟಗರು' ಸಿನಿಮಾವನ್ನು ಫಸ್ಟ್ ಡೇ ಉರ್ವಶಿ ಚಿತ್ರಮಂದಿರದಲ್ಲಿ ನೋಡಲಿದ್ದಾರೆ. ಅಣ್ಣನ ಸಿನಿಮಾವನ್ನು ಪುನೀತ್ ಮೊದಲ ದಿನವೇ ನೋಡುವ ಪ್ಲಾನ್ ಮಾಡಿದ್ದಾರೆ.
ಅಂದು ತಮ್ಮ ಎಲ್ಲ ಸಿನಿಮಾ ಕೆಲಸಗಳ ಜಂಜಾಟಗಳನ್ನು ಬಿಟ್ಟು ಸಿನಿಮಾವನ್ನು ಏಂಜಾಯ್ ಮಾಡಲಿದ್ದಾರೆ. ಪುನೀತ್ ಮಾತ್ರವಲ್ಲದೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಸ್ನೇಹಿತ ಶಿವಣ್ಣನ 'ಟಗರು' ಸಿನಿಮಾಗೆ ಶುಭಾಶಯ ಕೋರಿದ್ದಾರೆ. ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್ ಸಹ ಚಿತ್ರಕ್ಕೆ ವಿಶ್ ಮಾಡಿದ್ದರು.
ಅಂದಹಾಗೆ, 'ಟಗರು' ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಮಾನ್ವಿತಾ ಹರೀಶ್, ಭಾವನ ಚಿತ್ರದ ನಾಯಕಿಯರಾಗಿದ್ದಾರೆ. ವಸಿಷ್ಟ ಮತ್ತು ಧನಂಜಯ್ ಪಾತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.
Comments