ದಿವಾಕರ್ ಬಾಳಲ್ಲಿ ಬೆಳಕಾದ 'ಅಭಿನಯಚಕ್ರವರ್ತಿ

ಕಿಚ್ಚ ಸುದೀಪ್ ರವರು ನಟನೆಯಲ್ಲಿ ಮಾತ್ರ ಅಭಿನಯ ಚಕ್ರವರ್ತಿಯಲ್ಲ ಗುಣದಲ್ಲೂ ಸಹ ಚಕ್ರವರ್ತಿಯೇ ಎಂದು ಮತ್ತೆ ಮತ್ತೆ ರುಜು ಮಾಡುತ್ತಿದ್ದಾರೆ. ಬಿಗ್ ಬಾಸ್ - ರನ್ನರಪ್ ಆದ ದಿವಾಕರ್ ರವರಿಗೆ ಎಷ್ಟ್ಟು ಸಂಭಾವನೆ ಸಿಕ್ಕಿತು ? ಎಂಬೆಲ್ಲ ಪ್ರಶ್ನೆಗಳಿಗೆ ಸ್ವತಃ ದಿವಾಕರ್ ರವರೆ ಉತ್ತರ ಕೊಟ್ಟಿದ್ದಾರೆ.
ಏನಪ್ಪಾ ಅದು ಅಂದ್ರೆ ಸ್ಪರ್ಧೆ ಮುಗಿದ ನಂತ್ರ ಸುದೀಪ್ ರವರು ದಿವಾಕರ್ ದಂಪತಿಗಳನ್ನು ಮನೆಗೆ ಕರೆದು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಎಂದು ದಿವಾಕರ ಹೇಳಿದ್ದಾರೆ. ಹೌದು, ಸಾಮಾನ್ಯ ವ್ಯಕ್ತಿ ದಿವಾಕರ್ ಅವರಿಗೆ ಬಿಗ್‌ಬಾಸ್ ಮನೆಯಿಂದ ಸಾಕಷ್ಟು ಹಣ ಸಿಗಲಿಲ್ಲ ಎನ್ನುವ ಕೂಗು ಕೇಳಿ ಬಂದಿತ್ತು. ಇದೇ ವೇಳೆ ಅಭಿನಯ ಚಕ್ರವರ್ತಿ ಸುದೀಪ್, ದಿವಾಕರ್ ಅವರಿಗೆ ಪರ್ಸನಲ್ ಆಗಿ ಸಹಾಯ ಮಾಡಿದ್ದಾರೆ. ದಿವಾಕರ್ ದಂಪತಿಯನ್ನು ಮನೆಗೆ ಕರೆಯಿಸಿಕೊಂಡಿದ್ದ ಸುದೀಪ್, ಇವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕಿಚ್ಚ ಸುದೀಪ್‌ರ ಔದಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ ದಿವಾಕರ್. ''ತಮ್ಮನ್ನು ಸುದೀಪ್ ಅವರು ಪ್ರೀತಿಯಿಂದ ನಡೆಸಿಕೊಂಡ್ರು. ಒಂದು ದೊಡ್ಡ ಮೊತ್ತದ ಹಣ ನೀಡಿದ್ರು. ಈ ಹಣದಿಂದಲೇ ನಾನು ಮನೆಯನ್ನು ಕಟ್ಟಿಕೊಳ್ಳಲು ಯೋಚಿಸಿದ್ದೇನೆ. ಜತೆಗೆ ತಮ್ಮ ಮುಂದಿನ ಚಿತ್ರಗಳಲ್ಲಿ ನಂಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಸುದೀಪ್ ಸರ್'' ಎಂದು ದಿವಾಕರ್ ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
Comments