ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಜಕುಮಾರ ಸಿನಿಮಾ ನಿರ್ದೇಶಕ ..!!

ರಾಜಕುಮಾರ ಸಿನಿಮಾ ಮೂಲಕ ಕನ್ನಡ ಚಿತ್ರ ರಸಿಕರಿಗೆ ಹಬ್ಬದೂಟ ಬಡಿಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಇಂದು ಬೆಂಗಳೂರು ಜೆ.ಪಿ. ನಗರದ ಸಿಂಧೂರಿ ಕನ್ವೆನ್ಷನ್ ಸೆಂಟರ್ನಲ್ಲಿ ಸುರಭಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೂವಿನ ಪಲ್ಲಕ್ಕಿಯಲ್ಲಿ ಬಂದಿಳಿದ ವಧು ಸುರಭಿಗೆ ಬೆಳಗ್ಗೆ 11.30ರ ವೃಷಭ ಲಗ್ನದಲ್ಲಿ ಆನಂದ್ ರಾಮ್ ಮಾಂಗಲ್ಯಧಾರಣೆ ಮಾಡಿದರು. ಕಳೆದ ವರ್ಷ ನವೆಂಬರ್ನಲ್ಲಿ ಆನಂದ್ ಹಾಗೂ ಸುರಭಿ ನಿಶ್ಚಿತಾರ್ಥ ನೆರವೇರಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸ್ನೇಹಿತರು ಮದುವೆಗೆ ಆಗಮಿಸಿ ವಧು ವರರಿಗೆ ಶುಭ ಕೋರಿದರು. ತಾರಾ, ನಿರ್ದೇಶಕ ಎಸ್. ನಾರಾಯಣ್, ಭಾರತಿ ವಿಷ್ಣುವರ್ಧನ್, ಅನಿರುದ್ಧ ಜತ್ಕರ್, ದ್ವಾರಕೀಶ್, ನಟ ಅಶೋಕ್, ನಟಿ ತಾರಾ, ನಿರ್ಮಾಪಕ ಕೆ. ಮಂಜು, ದತ್ತಣ್ಣ, ಉಪೇಂದ್ರ, ಗಾಯಕ ವಿಜಯ್ ಪ್ರಕಾಶ್, ರಚಿತಾ ರಾಮ್ ಹಾಗೂ ಮತ್ತಿತರರು ವಿವಾಹ ಸಮಾರಂಭದಲ್ಲಿ ಹಾಜರಿದ್ದರು.
Comments