ಬೀದಿ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಹೃತಿಕ್ ರೋಷನ್

ಜೈಪುರದ ಬೀದಿ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಹೃತಿಕ್ . ಜೈಪುರದಲ್ಲಿ ಸೂಪರ್ 30 ಚಿತ್ರೀಕರಣ ನಡೆಯುತ್ತಿದೆ.ಪಿಂಕ್ ಸಿಟಿಯಲ್ಲಿ ಹೃತಿಕ್ ರೋಷನ್ ಸೈಕಲ್ ಏರಿ ಹಪ್ಪಳ ಮಾರುತ್ತಿದ್ರು. ಹಳೆಯ ಪ್ಯಾಂಟು, ಅಂಗಿ, ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಥೇಟ್ ಬೀದಿ ಬದಿ ವ್ಯಾಪಾರಿಗಳಂತಿತ್ತು ಹೃತಿಕ್ ಗೆಟಪ್.
ಈ ಮೂಲಕ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ವಿಶೇಷ ಅಂದ್ರೆ ಹೊಸ ಲುಕ್ ನಲ್ಲಿ ಹೃತಿಕ್ ರನ್ನು ಯಾರೂ ಗುರುತು ಹಿಡಿದಿಲ್ಲ. ಆನಂದ್ ಕುಮಾರ್, ಸೂಪರ್ 30 ಎಂಬ ಸಂಸ್ಥೆಯೊಂದನ್ನು ಕಟ್ಟಿ ಅಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತಿ ಹೊಂದಿರೋ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋಚಿಂಗ್ ಕೊಡ್ತಾರೆ. ಕಳೆದ 15 ವರ್ಷಗಳಲ್ಲಿ ಆನಂದ್ ಕುಮಾರ್ ಗರಡಿಯಲ್ಲಿ ತರಬೇತಿ ಪಡೆದ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಪಡೆದಿದ್ದಾರೆ. 396 ವಿದ್ಯಾರ್ಥಿಗಳು ಐಐಟಿಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಸೂಪರ್ 30 ಚಿತ್ರದಲ್ಲಿ ಹೃತಿಕ್ ಲುಕ್ ನೋಡಿ ಖುದ್ದು ಆನಂದ್ ಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments