ಸುದೀಪ್ ಅಭಿನಯದ ಕೋಟಿಗೊಬ್ಬ- 3 ಸೆಟ್ಟೇರಲು ಡೇಟ್ ಫಿಕ್ಸ್

ಸುದೀಪ್ ಇತ್ತೀಚೆಗಷ್ಟೇ ಡಿ ವಿಲನ್ ಚಿತ್ರೀಕರಣ ಮುಗಿಸಿ ಪೈಲ್ವಾನ್ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಮಾಡುತ್ತಿದ್ದು ಈ ಮದ್ಯೆ ಕೊಟ್ಟಿಗೊಬ್ಬ ಪಾರ್ಟ್- 3 ಸಿನಿಮಾ ಮಾರ್ಚ್ ರಂದು ಸೆಟ್ಟೇರುತ್ತಿದೆ. ಈ ಸಿನಿಮಾದ ವಿಶೇಷವೆಂದರೆ ಸುದೀಪ್ ರವರು ಚಿತ್ರಕತೆ ಬರೆದಿರುವುದು.
ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಶಿವ ಕಾರ್ತಿಕ್. ಇವರಿಗೆ ಇದು ಮೊದಲ ಸಿನಿಮಾ. ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ. ವಿರಾಮದ ನಂತರದ ಕತೆ ಪೂರ್ತಿ ಯೂರೋಪ್ ದೇಶದಲ್ಲಿ ಚಿತ್ರೀಕರಣ ನಡೆಯಲಿದೆ.'ಕೋಟಿಗೊಬ್ಬ 2' ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರವಿಶಂಕರ್ ಜೈಲಿಗೆ ಹೋಗುತ್ತಾರೆ. ಆ ಪಾತ್ರ ಪಾರ್ಟ್-3 ನಲ್ಲೂ ಮುಂದುವರಿಯಲಿದೆ. ಜೈಲಿನಿಂದ ರವಿಶಂಕರ್ ಹೇಗೆ ಬರುತ್ತಾರೆ, ಅವರ ಪಾತ್ರ ಇಲ್ಲೂ ಹೇಗೆ ಮುಂದುವರಿಯುತ್ತದೆ. 'ಕತೆಯ ಒಂದು ಸಾಲು ಕೊಟ್ಟಿರುವುದು ನಟ ಸುದೀಪ್ ಅವರೇ. ಅವರು ಕೊಟ್ಟ ಕತೆಯನ್ನು ತುಂಬಾ ಸಮಯ ತೆಗೆದುಕೊಂಡು ಚಿತ್ರಕಥೆ ಮಾಡಿಸಿ ಕಾರ್ತಿಕ್ ಅವರಿಂದ ನಿರ್ದೇಶನ ಮಾಡಿಸುತ್ತಿದ್ದೇವೆ. ಚಿತ್ರಕತೆಯೇ ಕೋಟಿಗೊಬ್ಬ 3 ಸಿನಿಮಾದ ಹೈಲೈಟ್' ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದು, ಶೇಖರ್ ಚಂದ್ರು ಕ್ಯಾಮೆರಾ ಹಿಡಿಯಲಿದ್ದಾರೆ.
Comments