ದರ್ಶನ್ ಅಭಿನಯದ 51ನೇ ಸಿನಿಮಾ 'ಯಜಮಾನ' ಮುಹೂರ್ತ
ಅಭಿಮಾನಿಗಳಿಗೆ ಬರ್ತ್ ಡೇ ಯಂದೇ ಸಿಹಿ ಸುದ್ದಿ ನೀಡಿರುವ ಚಾಲೆಂಜಿಂಗ್ ಸ್ಟಾರ್. ವಿಷ್ಣುವರ್ಧನ್ ರವರು ಅಭಿನಯಿಸಿದ್ದ ಯಜಮಾನ ಎಂಬ ಚಿತ್ರ ಶೀರ್ಷಿಕೆಯೊಂದಿಗಿನ ಸಿನಿಮಾದಲ್ಲಿ ಅಭಿನಯಿಸಲಿರುವ ದಚ್ಚು ಇಂದು ಚಿತ್ರದ ಮಹೂರ್ತ ಜರುಗಿದೆ.
ನಟ ದರ್ಶನ್ ಅಭಿನಯದ 51ನೇ ಸಿನಿಮಾ 'ಯಜಮಾನ' ಮುಹೂರ್ತ ಇಂದು ಬೆಳಗ್ಗೆ ಬೆಂಗಳೂರಿನ ಗಣೇಶ ದೇವಸ್ಥಾನವೊಂದರಲ್ಲಿ ಜರುಗಿತು. ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ದರ್ಶನ್ ತಮ್ಮ ದಿನಕರ್ ತೂಗುದೀಪ್ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮೀಡಿಯಾ ಹೌಸ್ ಸ್ಟುಡಿಯೋ ಪ್ರೊಡಕ್ಷನ್ ಹೌಸ್ ಅಡಿ ಬಿ. ಸುರೇಶ್ ಹಾಗೂ ಶೈಲಜಾ ನಾಗ್ ಚಿತ್ರವನ್ನು ನಿರ್ಮಿಸುತ್ತಿದ್ದರೆ, ಪಿ ಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇಂದಿನ ಸಮಾರಂಭದಲ್ಲಿ ಚಿತ್ರದ ಸಂಗೀತ ನಿರ್ದೇಶಕ ಹಾಗೂ ಕ್ರಿಯೇಟಿವ್ ಹೆಡ್ ವಿ. ಹರಿಕೃಷ್ಣ, ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ. ಸುರೇಶ್, ನಿರ್ದೇಶಕ ಕುಮಾರ್ ಹಾಗೂ ಇನ್ನಿತರರು ಹಾಜರಿದ್ದರು. ದರ್ಶನ್ ಸ್ನೇಹಿತರೂ ಕೂಡಾ ಸ್ಥಳದಲ್ಲಿ ಹಾಜರಿದ್ದು ಚಿತ್ರಕ್ಕೆ ಶುಭಾಶಯ ಕೋರಿದರು. ಇನ್ನು ನಾಯಕಿ ರಶ್ಮಿಕಾ ಮಂದಣ್ಣ ಹಳದಿ ಬಣ್ಣದ ಕುರ್ತಾ ಧರಿಸಿ ಬಹಳ ಕ್ಯೂಟ್ ಆಗಿ ಕಾಣುತ್ತಿದ್ದರು. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ.
Comments