ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ನಟ - ನಟಿಯರು ಧರಿಸಿದ್ದ ಡ್ರೆಸ್ ಗಳನ್ನು ಏನ್ಮಾಡ್ತಾರೆ .?
ಸಿನಿಮಾ ಅಂದ್ರೇನೆ ರಂಗು ರಂಗಿನ ಕಲರ್ ಫುಲ್ ಜಗತ್ತು. ಸಿನಿಮಾಗಳಿಗೆ ಎಂದು ನಟ ನಟಿಯರಿಗೆ ತರಿಸಿದ್ದ ಬಟ್ಟೆಗಳು ಸಾಮಾನ್ಯವಾಗಿ ದುಬಾರಿವುಳ್ಳವಾಗುತ್ತವೆ. ಬಾಡಿಗೆಗೆ ಕೊಂಡಿರುತ್ತಾರೆ. ಹೀರೋ, ಹೀರೋಯಿನ್ ಹಾಕಿಕೊಳ್ಳುವ ಬಟ್ಟೆಯನ್ನ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಏನು ಮಾಡುತ್ತಾರೆ ಎನ್ನುವುದೇ ಹಲವರ ಪ್ರಶ್ನೆಗಳು.
ಒಂದು ಸಿನಿಮಾದಲ್ಲಿ ನಟ ನಟಿಯರ ಬಟ್ಟೆಗಳಿಗೆ ಸುಮಾರು 10 -15 ಲಕ್ಷದಷ್ಟು ಖರ್ಚಾಗುತ್ತದೆ. ಇವರು ಧರಿಸುವ ಬಟ್ಟೆಗಳೆಲ್ಲ ಬ್ರಾಂಡೆಡ್ ಆಗಿರುತ್ತದೆ. ಸ್ಟಾರ್ ಹೀರೋಗಳು ಅಥವಾ ಹೀರೋಯಿನ್ ಆದರೆ ಒಬ್ಬರ ಬಟ್ಟೆಗೆ ಸುಮಾರು 10 ಲಕ್ಷದವರೆಗೆ ಖರ್ಚಾಗುತ್ತದೆ. ಹಾಗಾದರೆ ಇಷ್ಟು ದುಬಾರಿ ಬಟ್ಟೆಗಳನ್ನ ಶೂಟಿಂಗ್ ಮುಗಿದ ನಂತರ ಏನು ಮಾಡುತ್ತಾರೆ ಅನ್ನುವುದೇ ಕುತೂಹಲ. ಕೆಲವು ನಿರ್ಮಾಪಕರು ಬಟ್ಟೆಗಳನ್ನ ಗೋಡನ್ ನಲ್ಲಿ ಇಡುತ್ತಾರೆ. ಕೆಲವರಂತೂ ಸೆಕೆಂಡ್ಸ್ ನಲ್ಲಿ ಮಾರಿ ಬಿಡುತ್ತಾರೆ. ಕೆಲವೊಮ್ಮೆ 10 ಲಕ್ಷದ ಬಟ್ಟೆ ಸೆಕೆಂಡ್ಸ್ ನಲ್ಲಿ 1 ಲಕ್ಷಕ್ಕೆ ಮಾರಾಟವಾಗುತ್ತದೆ.
ಕೆಲವರು ಬಟ್ಟೆಯನ್ನ ಖರೀದಿ ಮಾಡಿ ಆರ್ಟಿಸ್ಟ್ ಗೆ ಬಾಡಿಗೆಗೆ ಕೊಡುತ್ತಾರೆ. ಸಿನಿಮಾ ಸೆಕೆಂಡ್ಸ್ ಬಟ್ಟೆಯನ್ನ ಮಾರುವುದಕ್ಕಾಗಿಯೇ ಮುಂಬೈ ನಲ್ಲಿ ಒಂದು ಮಾರ್ಕೆಟ್ ಇದೆ. ಕೆಲವು ನಿರ್ಮಾಪಕರು ಅಲ್ಲಿಗೆ ಹೋಗಿ ಮಾರುತ್ತಾರೆ. ಮತ್ತೆ ಮತ್ತೆ ಸಿನಿಮಾ ತೆಗೆಯುವ ನಿರ್ಮಾಪಕರು ಮಾತ್ರ ಗೋಡನ್ ನಲ್ಲಿ ಇಟ್ಟು ಕ್ಯಾರೆಕ್ಟರ್ ಆರ್ಟಿಸ್ಟ್ ಗೆ ಈ ಬಟ್ಟೆ ಬಳಸುತ್ತಾರೆ. ಕೆಲವೊಮ್ಮೆ ಸಿನಿಮಾ ಶೂಟಿಂಗ್ ವೇಳೆ ನಟ ನಟಿಯರಿಗೆ ಇಷ್ಟವಾದ ಬಟ್ಟೆ ಮತ್ತು ಶೂ ಗಳನ್ನ ಅವರೇ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಎಲ್ಲಾ ಸ್ಟಾರ್ ಮಾಡುವುದಿಲ್ಲ. ಇದು ಸಿನಿಮಾ ಬಟ್ಟೆಗಳ ವಿಚಾರ ಆದರೆ ಇನ್ನು ಸೀರಿಯಲ್ ಬಟ್ಟೆಗಳು, ಸೀರಿಯಲ್ ಗಳಲ್ಲಿ ಅವರಿಗೆ ಅವರೇ ಬಟ್ಟೆಗಳನ್ನ ತೆಗೆದುಕೊಂಡು ಬರಬೇಕು. ನಿರ್ಮಾಪಕರು ಖರೀದಿಸಿ ಕೊಡುವುದಿಲ್ಲ.
Comments