ಕಿಚ್ಚ ಸಿಕ್ಸ್ ಪ್ಯಾಕ್ ಮಾಡ್ತಿರೋದೇಕೆ ಗೋತ್ತಾ ..!
ಕಿಚ್ಚ ಸುದೀಪ್ ರವರು ಈಗ ದಿ ವಿಲನ್ ಬಹುತೇಕ ಸಿನಿಮಾ ಶೂಟಿಂಗ್ ಮುಗಿಸಿರುವ ಸುದೀಪ್. ಇದೀಗ ಸಿಕ್ಸ್ ಪ್ಯಾಕ್ ಕಡೆ ಗಮನ ಹರಿಸಿದ್ದಾರೆ. ಅಷ್ಟಕ್ಕೂ ಸುದೀಪ್ ಯಾಕೆ ಸಿಕ್ಸ್ ಪ್ಯಾಕ್ ಮಾಡ್ತಿದಾರೆ ಗೊತ್ತಾ . ಕಿಚ್ಚ ಪೈಲ್ವಾನ್ ಚಿತ್ರಕ್ಕಾಗಿ ಎ ಕಸರತ್ತು ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬ್ಯಾಟ್ಮಿಂಟನ್, ಕ್ರಿಕೆಟ್, ಆಬ್ಸ್ ಇತ್ಯಾದಿ ಕ್ರೀಡೆಗೆ ಸಂಬಂಧಿಸಿದ ಆಟಗಳಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ನಟ ಸುದೀಪ್ ಇದುವರೆಗೆ ಜಿಮ್ ಗೆ ಹೋಗಿ ದೇಹ ದಂಡಿಸಿದವರಲ್ಲ. ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ತರಬೇತುದಾರರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಕಳೆದ ಕೆಲ ವಾರಗಳಿಂದ ಸುದೀಪ್ ಗೆ ಜೀತ್ ದೇವಯ್ಯ ಎಂಬುವವರು ತರಬೇತಿ ನೀಡುತ್ತಿದ್ದಾರೆ. ಇನ್ನು ಒಂದೆರಡು ಮೂರು ವಾರಗಳಲ್ಲಿ ಅವರು ದೇಹವನ್ನು ಸಿನಿಮಾಕ್ಕೆ ತಕ್ಕಂತೆ ಮಾಡಿಕೊಳ್ಳಲಿದ್ದಾರೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಯೋಜನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕರು.ಆದರೆ ಪೈಲ್ವಾನ ಕೇವಲ ಸಿಕ್ಸ್ ಪ್ಯಾಕ್ ಗೆ ಮಾತ್ರ ಸಂಬಂಧಪಟ್ಟದ್ದಲ್ಲವಂತೆ. ಬಾಕ್ಸರ್ ಮತ್ತು ರೆಸ್ಲರ್ ಪಾತ್ರಕ್ಕೆ ಹೊಂದಿಕೆಯಾಗಲು ಸುದೀಪ್ ಜಿಮ್ ಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಸುದೀಪ್ ತಮ್ಮ ತರಬೇತುದಾರರ ಜೊತೆ ಇದೇ ವಾರ ಥೈಲ್ಯಾಂಡ್ ಗೆ ಹೋಗಲಿದ್ದಾರಂತೆ. ಅಲ್ಲಿನ ಕುಗ್ರಾಮವೊಂದರಲ್ಲಿ ಬಾಕ್ಸಿಂಗ್ ಮತ್ತು ರೆಸ್ಲಿಂಗ್ ಗೆ ಸಂಬಂಧಪಟ್ಸಾಂಟ ಸಾಂಪ್ರದಾಯಿಕ ತರಬೇತಿ ಪಡೆದು ಬರಲಿದ್ದಾರಂತೆ.
Comments