ಟ್ರೋಲ್ ಮಾಡಿದ್ದ ಕಿಡಿಗೇಡಿಗೆ ವಾರ್ನಿಂಗ್ ಕೊಟ್ಟ ಬಾಲಿವುಡ್ ನಟಿ
ಇತ್ತೀಚಿಗೆ ಸ್ಟಾರ್ ನಟಿಯರನ್ನು ಟ್ರೋಲ್ ಮಾಡುವುದು ಕೆಲ ಕಿಡಿಗೇಡಿಗಳ ಕೆಲಸವಾಗಿದೆ. ಕೆಲ ನಟಿಯರು ತಲೆ ಕೆಡಿಸಿಕೊಳ್ಳದೆ ಸುಮ್ಮನಾಗ್ತಾರೆ , ಮತ್ತೆ ಕೆಲವರು ಟ್ರೋಲ್ ಗೆ ಗುರಿ ಮಡಿದ ಕಿಡಿಗೇಡಿಗಳಿಗೆ ಸರಿಯಾಗಿ ಬುದ್ದಿ ಕಳಿಸ್ತಾರೆ. ಹೌದು ಅಂತದ್ದೇ ಒಂದು ಘಟನೆ ಬಾಲಿವುಡ್ ನಟಿ ಝರೀನ್ ಖಾನ್ ಜೀವನದಲ್ಲಿ ಸಂಭವಿಸಿದೆ.
ಬಾಲಿವುಡ್ ನಟಿ, ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳಿಗೆ ಟ್ರೋಲ್ ಮಾಡುತ್ತಿದ್ದ ವ್ಯಕ್ತಿಗೆ ಚಳಿ ಬಿಡಿಸಿದ್ದಾಳೆ. ಟಿವಿ ಶೋ ಒಂದರಲ್ಲಿ ಟ್ರೋಲ್ ಪ್ರಿಯನೊಂದಿಗೆ ಮುಖಾಮುಖಿಯಾದ ಝರೀನ್, ಆತನ ಮೇಲೆ ಹರಿಹಾಯ್ದಿದ್ದಾಳೆ. ಎಂಟಿವಿ ಟ್ರೋಲ್ ಪೊಲೀಸ್ ಶೋನಲ್ಲಿ ಪಾಲ್ಗೊಂಡಿದ್ದ ಝರೀನ್, ಆ ಯುವಕನನ್ನು ತರಾಟೆಗೆ ತೆಗೆದುಕೊಂಡ್ಲು. ನನ್ನ ಕೈಗಳು ನಿನ್ನ ಮುಖಕ್ಕಿಂತ್ಲೂ ದೊಡ್ಡದಾಗಿವೆ. ಕಪಾಳಕ್ಕೆ ಒಂದು ಬಾರಿಸ್ಲಾ? ನಿನ್ನ ದವಡೆಯೇ ಮುರಿದು ಹೋಗಬಹುದು ಅಂತಾ ಹೇಳಿದ್ದಾಳೆ. ಟ್ರೋಲ್ ಮಾಡ್ತಿದ್ದ ವ್ಯಕ್ತಿಗೆ ಬಿಸಿ ಮುಟ್ಟಿಸಿರೋ ವಿಡಿಯೋವನ್ನು ಝರೀನ್, ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಕೂಡ ಮಾಡಿದ್ದಾಳೆ.
ಟ್ರೋಲ್ ನಿಂದ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ ಅಂತಾ ಝರೀನ್ ಅಭಿಪ್ರಾಯಪಟ್ಟಿದ್ಲು. ಕೆಟ್ಟದಾಗಿ ಟ್ರೋಲ್ ಮಾಡುವ ವ್ಯಕ್ತಿಗಳು ಸಮಾಜ ಘಾತುಕರು ಅಂತಾ ಹೇಳಿದ್ಲು. ಈ ರೀತಿ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವವರು ಧೈರ್ಯವಿದ್ದರೆ ನನ್ನ ಬಳಿಯೇ ನೇರವಾಗಿ ಹೇಳಲಿ ಅಂತಾನೂ ಸವಾಲು ಹಾಕಿದ್ದಳು. ಸಲ್ಮಾನ್ ಖಾನ್ ರ ವೀರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಝರೀನ್ ಗೆ, ದಪ್ಪಗಿದ್ದಾಳೆ ಅನ್ನೋ ಕಾರಣಕ್ಕೆ ಜಾಲತಾಣದಲ್ಲಿ ಕೆಟ್ಟ ಕಮೆಂಟ್ ಮಾಡಲಾಗಿತ್ತು.
Comments