ಸಾಯಿಪ್ರಕಾಶ್ ರ ನೂರನೇ ಸಿನಿಮಾದಲ್ಲಿ ಸೆಂಚುರಿ ಸ್ಟಾರ್



ಸಾಯಿಪ್ರಕಾಶ್ ಅವರ ಸದ್ಯದಲ್ಲೇ ನೂರನೆಯ ಚಿತ್ರ ಈ ವರ್ಷ ಶುರು ಮಾಡಲಿದ್ದಾರೆ.ಹಾಗಿದ್ರೆ ಆ ಚಿತ್ರ ಯಾವದು ಸಿನಿಮಾದಲ್ಲಿ ಯಾರು ಹೀರೋ, ಯಾರೆಲ್ಲ ಅಭಿನಯಿಸಲಿದ್ದಾರೆ ಇನ್ನು ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.
ಈ ಎಲ್ಲ ವಿಚಾರಗಳಿಗೂ ತೆರೆ ಎಳೆದಿರುವ ಸಾಯಿಪ್ರಕಾಶ್ ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಿಸಲಿದ್ದು, ಶಿವರಾಜಕುಮಾರ್ ಮತ್ತು ರಾಧಿಕಾ ಇಬ್ಬರೂ ಅಣ್ಣ-ತಂಗಿಯಾಗಿ ನಟಿಸಲಿದ್ದಾರೆ. ಈ ಹಿಂದೆ ಸಹ ಮೂವರು ಸೇರಿ ಚಿತ್ರ ಮಾಡುವ ಪ್ರಸ್ಥಾಪ ಇತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ. ಈಗ ಹಳೆಯ ಯೋಜನೆ ಮತ್ತು ಕಥೆಗಳನ್ನೆಲ್ಲಾ ಪಕ್ಕಕ್ಕಿಟ್ಟು, ಹೊಸದಾಗಿ ಕಥೆ ಮಾಡಿದ್ದಾರಂತೆ ಸಾಯಿಪ್ರಕಾಶ್.ಅದನ್ನು ಶಿವರಾಜಕುಮಾರ್ ಅವರ ಮುಂದಿಟ್ಟಿದ್ದಾರೆ. ಚಿತ್ರದಲ್ಲಿ ನಟಿಸುವುದಕ್ಕೆ ಅನುಮೋದನೆ ಸಹ ಕೊಟ್ಟಿರುವ ಶಿವರಾಜಕುಮಾರ್, ಏಪ್ರಿಲ್ ನಂತರ ಪಕ್ಕಾ ಡೇಟ್ಸ್ ಕೊಡುವುದಾಗಿ ಹೇಳಿದ್ದಾರಂತೆ. ಅಲ್ಲಿಗೆ ಸಾಯಿಪ್ರಕಾಶ್ ಅವರ 100ನೇ ಚಿತ್ರ ಈ ವರ್ಷ ಶುರುವಾಗಿ, ಇದೇ ವರ್ಷ ಮುಗಿಯುವ ಸಾಧ್ಯತೆ ಇದೆ.
Comments