ಪ್ರಿಯಾ ವಾರಿಯರ್ ವಿಡಿಯೋ ವಿರುದ್ಧ ಸಾಧು ಗರಂ
ಅನೇಕ ಸ್ಟಾರ್ ಗಳನ್ನೂ ಹಿಂದಿಕ್ಕಿ ಮುನ್ನುಗುತ್ತಿರುವ ಪ್ರಿಯಾ ವಾರಿಯರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗೀಡಾಗಿದ್ದರೆ. ಅಲ್ಲದೆ ದಾಖಲೆ ನಿರ್ಮಿಸುವತ್ತ ಹೆಜ್ಜೆ ಹಾಕಿದ್ದಾರೆ.ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾ ವಾರಿಯರ್ ಹವಾ ಜೋರಾಗಿದೆ. ಒಂದು ಸಣ್ಣ ವಿಡಿಯೋ ತುಣುಕಿನಿಂದ ಪ್ರಿಯಾ ಸಖತ್ ಫೇಮಸ್ ಆಗಿ ಬಿಟ್ಟಿದ್ದಾಳೆ.
ಯುವಕರ ಮನಸ್ಸನ್ನು ಗೆದ್ದು ನ್ಯಾಶನಲ್ ಕ್ರಶ್ ಆಗಿ ಬಿಟ್ಟಿರುವ ಪ್ರಿಯಾ ವಾರಿಯರ್ ಬಗ್ಗೆ ಎಲ್ಲರೂ ಹೊಗಳುತ್ತಿರುವಾಗ , ಕನ್ನಡದ ನಟ ಸಾಧುಕೋಕಿಲ ಕೂಡ ಪ್ರಿಯಾ ವಾರಿಯರ್ ಬಗ್ಗೆ ಮಾತನಾಡಿದ್ದಾರೆ.ಇತ್ತಿಚೆಗೆ ನಡೆದ 'ಪ್ರೇಮಬರಹ' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಸಾಧುಕೋಕಿಲ ಮಾತನಾಡಿದ್ದಾರೆ. "ಒಂದು ಹುಡುಗಿಯ ವಿಡಿಯೋವನ್ನ ನೀವೆಲ್ಲಾ ಸೇರಿ ಇಷ್ಟು ಫೇಮಸ್ ಮಾಡಿದ್ದೀರಾ, ಫೇಸ್ಬುಕ್ ವಾಟ್ಸಾಫ್ ಗಳಲ್ಲಿ ಆಕೆಯ ಬಗ್ಗೆ ಸ್ಟೇಟಸ್ ಗಳನ್ನು ಹಾಕಿ ಸಖತ್ ವೈರಲ್ ಮಾಡಿದ್ದೀರ, ಆದರೆ ಇದೇ ಆಸಕ್ತಿಯನ್ನು ಪ್ರೇಮಬರಹ ದಂತಹ ಒಳ್ಳೆ ಚಿತ್ರದ ಮೇಲೆ ತೋರಿದಿದ್ದರೆ ಚಿತ್ರ ಇನ್ನು ಹೆಚ್ಚಿನ ಗುಣಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಈ ಚಿತ್ರದಲ್ಲಿ ಸೈನಿಕರ ಬಗ್ಗೆ ತುಂಬಾ ಚೆನ್ನಾಗಿ ತೋರಿಸಲಾಗಿದೆ. ಯಾವುದೇ ಅಶ್ಲೀಲತೆಯಿಲ್ಲದ ಸ್ವಚ್ಚ ಸುಂದರ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಪೋಸ್ಟ್ ಮಾಡುವುದನ್ನು ಬಿಟ್ಟು ಆ ವಿಡಿಯೋ ಬಗ್ಗೆ ಯ್ಯಾಕೆ ಅಷ್ಟೊಂದು ಪೋಸ್ಟ್ ಮಾಡುತ್ತೀರಿ ಎಂದು ಬೇಸರ ವ್ಯಕ್ತ ಪಡಿಸುತ್ತೀರಿ. ಈ ಮೂಲಕ ಕನ್ನಡ ಸಿನಿಮಾ ಮೇಲಿನ ಪ್ರೀತಿಯನ್ನು ಹೊರ ಹಾಕಿದ್ದಾರೆ.
Comments