ಸೂಪರ್ ಸ್ಟಾರ್ ಗೆ ಬಿಗ್ ಫೈಟ್ ಕೊಡ್ತಾರಾ ರಾಮಾಚಾರಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲ ಕರಿಕಾಳನ್' ಹಾಗು ರಾಕಿಂಗ್ ಸ್ಟಾರ್ ಯಶ್ ರವರ ಕೆಜಿಫ್ ಸಿನಿಮಾ ಒಂದೇ ತಿಂಗಳಿನಲ್ಲಿ ತೆರೆ ಕಾಣುವ ಹಿನ್ನಲೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹೌದು ಸೂಪರ್ ಸ್ಟಾರ್ ಹಾಗು ರಾಕಿಂಗ್ ಸ್ಟಾರ್ ನಡುವೆ ಬಾಕ್ಸ್ ಆಫೀಸ್ ಫೈಟ್ ನಡೆಯುವ ಸಾಧ್ಯತೆ ಇದೆ.
ಇಬ್ಬರು ಸೂಪರ್ ಸ್ಟಾರ್ ಗಳ ಸಿನಿಮಾ ಒಂದೇ ದಿನವಲ್ಲ, ಒಂದೇ ತಿಂಗಳು ರಿಲೀಸ್ ಆದ್ರೂ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಫೈಟ್ ನಡೆಯುತ್ತದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಥಿಯೇಟರ್ ಗೆ ಎಂಟ್ರಿ ಕೊಡುವ ಸಾಧ್ಯತೆ ಇದ್ದು, ಈಗಾಗಲೇ ಹೊಸ ಲೆಕ್ಕಾಚಾರ ಶುರುವಾಗಿವೆ. 'ಕಾಲ ಕರಿಕಾಳನ್' ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರವಾಗಿದ್ದು, ಏಪ್ರಿಲ್ ನಲ್ಲಿ ರಿಲೀಸ್ ಆಗಲಿದೆ. ಇದೇ ವೇಳೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್.' ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಯಶ್ -ರಜನಿಕಾಂತ್ ನಡುವೆ ಬಾಕ್ಸ್ ಆಫೀಸ್ ಫೈಟ್ ನಡೆಯುವ ಸಾಧ್ಯತೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಕುತೂಹಲದಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್.'. 80 ರ ದಶಕದ ಲುಕ್ ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ಸಮಯ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿರುವುದರಿಂದ ಚಿತ್ರದ ಬಗೆಗಿನ ನಿರೀಕ್ಷೆ ಕೂಡ ಹೆಚ್ಚಾಗಿದೆ. ಅಂದ ಹಾಗೇ 5 ಭಾಷೆಗಳಲ್ಲಿ 'ಕೆ.ಜಿ.ಎಫ್.' ಸಿನಿಮಾ ನಿರ್ಮಾಣವಾಗ್ತಿದೆ.
Comments