ಅಪ್ಪು ಸಿನಿಮಾಗಾಗಿ ಮತ್ತೆ ಕನ್ನಡಕ್ಕೆ ಬಂದ ಕಾಲಿವುಡ್ ಸಂಗೀತ ನಿರ್ದೇಶಕ..!!



ಪುನೀತ್ ರಾಜ್ ಕುಮಾರ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಉತ್ತರ ಸಿಕ್ಕಿದೆ. 'ರಣವಿಕ್ರಮ' ನಂತರ ಮತ್ತೆ ಪವನ್ ಒಡೆಯರ್ ಪುನೀತ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಈಗ ಕಾಲಿವುಡ್ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ ಕನ್ನಡಕ್ಕೆ ಬಂದಿದ್ದಾರೆ. ಡಿ.ಇಮಾನ್ ಈಗ ಮತ್ತೆ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.
ಪುನೀತ್ ರಾಜ್ ಕುಮಾರ್ ಸಿನಿಮಾಗೆ ಇಮಾನ್ ಮ್ಯೂಸಿಕ್ ನೀಡಲಿದ್ದಾರೆ. ವಿಶೇಷ ಅಂದರೆ ಕನ್ನಡದಲ್ಲಿ ಇಮಾನ್ ಅವರ ಎರಡನೇ ಸಿನಿಮಾ ಇದಾಗಿದ್ದು, ಇದೇ ಮೊದಲ ಬಾರಿಗೆ ಪುನೀತ್ ಚಿತ್ರಕ್ಕೆ ಇಮಾನ್ ಸಂಗೀತ ನೀಡುತ್ತಿದ್ದಾರೆ.ಈ ಹಿಂದೆ ಸುದೀಪ್ ಅವರ 'ಕೋಟಿಗೊಬ್ಬ 2' ಸಿನಿಮಾಗೆ ಇಮಾನ್ ಮ್ಯೂಸಿಕ್ ನೀಡಿದ್ದರು. ಆ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲಿಯೂ ''ಸಾಲುತಿಲ್ಲವೆ... ಸಾಲುತಿಲ್ಲವೆ...'' ಹಾಡು ಸಿಕ್ಕಾಪಟ್ಟೆ ಫೇಮಸ್ ಆಗದೆ.ಪುನೀತ್ ಅವರ ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಮಾರ್ಚ್ 5 ರಿಂದ ಶುರು ಆಗಲಿದೆ.
Comments