ದಚ್ಚು ಹುಟ್ಟುಹಬ್ಬಕ್ಕೆ ಪಿನ್ ಲ್ಯಾಂಡ್ ನಿಂದ ಬಂದ ವಿಶೇಷ ಶುಭಾಶಯ..!!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಇತ್ತೀಚಿಗಷ್ಟೆ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷ ಸಹ ದರ್ಶನ್ ಅವರ ನೂರಾರು ಅಭಿಮಾನಿಗಳು ಅವರಿಗೆ ಶುಭ ಕೋರಿದ್ದಾರೆ. ಅದರ ಜೊತೆಗೆ ಡಿ ಬಾಸ್ ಗೆ ಪಿನ್ ಲ್ಯಾಂಡ್ ನಿಂದ ವಿಶೇಷವಾದ ಶುಭಾಶಯ ಬಂದಿದೆ.
ಪಿನ್ ಲ್ಯಾಂಡ್ ನಲ್ಲಿ ವಾಸವಾಗಿರುವ ದಂಪತಿ ದರ್ಶನ್ ಬರ್ತ್ ಡೇ ಗೆ ವಿಶ್ ಮಾಡಿದ್ದಾರೆ. ಈ ವಿದೇಶಿ ದಂಪತಿಯ ಶುಭಾಶಯದ ವಿಡಿಯೋ ದರ್ಶನ್ ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಕನ್ನಡದಲ್ಲಿಯೇ ಈ ದಂಪತಿ ದರ್ಶನ್ ಗೆ ಶುಭ ಕೋರಿರುವುದು ವಿಶೇಷವಾಗಿದೆ.ಅಂದಹಾಗೆ, ದರ್ಶನ್ ಫೆಬ್ರವರಿ 16ಕ್ಕೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇಡೀ ದಿನ ತಮ್ಮ ಅಭಿಮಾನಿಗಳ ಜೊತೆಗೆ ಕಳೆಯುವ ಮೂಲಕ ಅವರು ತಂದಿರುವ ಕೇಕ್ ಕಟ್ ಮಾಡಿ, ಫೋಟೋ ತೆಗೆಸಿಕೊಂಡು ಬರ್ತ್ ಡೇ ಸೆಲಿಬ್ರಿಟ್ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬದ ವಿಶೇಷವಾಗಿ ಅವರ 21ನೇ ಸಿನಿಮಾ 'ಯಜಮಾನ' ಚಿತ್ರದ ಟೀಸರ್ ರಿಲೀಸ್ ಆಗಿದೆ.
Comments