ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ಗೆ ಭರ್ಜರಿ ಗಿಫ್ಟ್ ..!!
42 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡ ದಚ್ಚು ಸಂತಸ ವ್ಯೆಕ್ತ ಪಡಿಸಿದ್ದಾರೆ. ದರ್ಶನ್ ಹುಟ್ಟುಹಬ್ಬದ ವಿಶೇಷ ಎಂಬಂತೆ ಅವರ 51 ನೇ ಚಿತ್ರದ ಯಜಮಾನ ಟೀಸರ್ ಬಿಡುಗಡೆಯಾಗಿದೆ. ಅಲ್ಲದೆ ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ಗೆ ಖುಷಿ ಒಂದೆಡೆಯಾದ್ರೆ ಯಜಮಾನ ಟೀಸರ್ ನೋಡಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.
ಇನ್ನು ಟೀಸರ್ ಗೆ ಆಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಧ್ವನಿ ನೀಡಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪಿ.ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದು, ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ, ನಟ ದೇವರಾಜ್, ಬಾಲಿವುಡ್ ನ ಠಾಕೂರ್ ಅನೂಪ್ ಸಿಂಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ರವಿಶಂಕರ್ ಹಾಗೂ ಧನಂಜಯ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
Comments