ದಿವಾಕರ್ ಗೆ ಸರ್ಪ್ರೈಸ್ ಕೊಟ್ಟ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ



ಬಿಗ್ ಬಾಸ್ ಸೀಸನ್ 5 ನಲ್ಲಿ ಉತ್ತಮ ಗೆಳೆಯರಾಗಿದ್ದ ಚಂದನ್ ಶೆಟ್ಟಿ ಹಾಗೂ ದಿವಾಕರ್ ರವರು ಬಿಗ್ ಬಾಸ್ ನಲ್ಲಿ ವಿನ್ನರ್ ಹಾಗೂ ರನ್ನರಪ್ ಸ್ಥಾನಗಳಿಸಿದ ಈ ಸ್ನೇಹಿತರು. ಸ್ಪರ್ದೆ ಮುಗಿದ ನಂತರವೂ ಹಾಗೆ ತಮ್ಮ ಗೆಳೆತನ ಮುಂದುವರೆಸಿಕೊಡು ಹೋಗಿದ್ದಾರೆ ಎನ್ನುವುದಕ್ಕೆ ಈ ಉದಾಹರಣೆಯೊಂದೇ ಸಾಕು.
ಹೌದು ಬಿಗ್ ಬಾಸ್ ಸೀಸನ್ ನ ರನ್ನರ್ ಆಫ್ ಸ್ಪರ್ಧಿ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮ ಇತ್ತು. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ವಿದ್ಯಾರಣ ಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಆಗಮಿಸಿ ದಿವಾಕರ್ ದಂಪತಿಗೆ ಶುಭಹಾರೈಸಿದ್ದಾರೆ. ಬಳಿಕ ದಿವಾಕರ್ ದಂಪತಿ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.
Comments