41 ನೇ ವಸಂತಕ್ಕೆ ಕಾಲಿಟ್ಟ ದಚ್ಚು....ಮುಂಬರುವ ಚಿತ್ರಗಳ ಘೋಷಣೆ ಅಭಿಮಾನಿಗಳಿಗೆ ಹಬ್ಬ!!

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಅಭಿಮಾನಿಗಳು ದರ್ಶನ್ ಅವರ 41 ನೇ ಹುಟ್ಟು ಹಬ್ಬಕ್ಕೆ ಹೊಸ ಮೆರುಗು ತಂದಿದ್ದಾರೆ. ಅಭಿಮಾನಿಗಳೇ ರೂಪಿಸಿರುವ ‘ಕರುನಾಡ ಪ್ರಿನ್ಸ್’ ಹೆಸರಿನ ಆಲ್ಬಂ ಬಿಡುಗಡೆ ಆಗುತ್ತಿದೆ.
ದರ್ಶನ್ ಗೆಟಪ್ ಗಳ ಪೈಕಿ ಕ್ರೇಜ್ ಸೃಷ್ಟಿಸಿದ್ದು ‘ಚಕ್ರವರ್ತಿ’ ಲುಕ್. ಆದರೆ, ಅದನ್ನೂ ಮೀರಿಸಿದ್ದು’ಕುರುಕ್ಷೇತ್ರ’ ಚಿತ್ರದ ಫೋಟೋಗಳು. ದರ್ಶನ್ ಅವರ ಮುಂದೆ 9 ಸಿನಿಮಾ ಆಫರ್ ಗಳಿವೆ. ‘ಯಜಮಾನ’ ನಂತರ ಎಂ.ಡಿ.ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ಸಿನಿಮಾ. ನಂತರ ಉಮಾಪತಿ ನಿರ್ಮಾಣದ ಪ್ರೇಮ್ ನಿರ್ದೇಶನದ ಚಿತ್ರ. ನಿರ್ಮಾಪಕ ಸಿದ್ದಾಂತ್ ಜತೆ ಒಂದು ಸಿನಿಮಾ.ರಾಮಮೂರ್ತಿ ನಿರ್ಮಾಣದ ‘ಮೆಜೆಸ್ಟಿಕ್’ ದರ್ಶನ್ ಅವರ ವೃತ್ತಿ ಪಯಣಕ್ಕೆ ಹೊಸ ತಿರುವು ಕೊಟ್ಟ ಸಿನಿಮಾ. ಆ ನೆನಪಿಗೆ ರಾಮಮೂರ್ತಿ ಅವರಿಗಾಗಿ ಸಿನಿಮಾ ಮಾಡಲು ದರ್ಶನ್ ನಿರ್ಧರಿಸಿದ್ದಾರೆ.ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಇರುವ ಕನ್ನಡ ಶಾಲೆಗೆ ಅಭಿಮಾನಿಗಳೇ ದರ್ಶನ್ ಅವರ ಹೆಸರಿನಲ್ಲಿ ಶಾಲೆಗೆ ಬೇಕಾದ ನೆರವು ನೀಡುತ್ತಿದ್ದಾರೆ. ಅಭಿಮಾನಿಗಳು ದರ್ಶನ್ ಅವರ ಬಳಿ ಬಂದು ವಿಷಯ ತಿಳಿಸಿದಾಗ ಕನ್ನಡ ಶಾಲೆ ಉಳಿಯಬೇಕು ಎನ್ನುವ ಅಭಿಮಾನಿಗಳ ಕನಸಿಗೆ ದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ.
50 ನೇ ಚಿತ್ರವನ್ನು ಬೇರೆಯವರಿಗೆ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದರೆ, ನಿರ್ಮಾಪಕ ಮುನಿರತ್ನ ಅವರು ಬಂದು ಕೇಳಿಕೊಂಡಾಗ 'ಕುರುಕ್ಷೇತ್ರ' ದಂತಹ ಸಿನಿಮಾ ಬಿಟ್ಟುಕೊಡಲು ಮನಸ್ಸಾಗದೆ ದರ್ಶನ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. 90 ದಿನ ಚಿತ್ರೀಕರಣ, ಹತ್ತಾರು ಕಲಾವಿದರು. ಬಹು ಕೋಟಿ ವೆಚ್ಚ. ಪರಭಾಷೆಯಗಳಲ್ಲೂ ಮಾತನಾಡಿಕೊಳ್ಳುವಂತೆ ಮಾಡಿದ ಚಿತ್ರ, ನಿರ್ಮಾಪಕ ಪ್ಯಾಷನ್, ಕಲಾವಿದರ ಶ್ರಮ, ಅದ್ದೂರಿ ಸೆಟ್‌ಗಳು ಈ ಎಲ್ಲ ಕಾರಣಗಳಿಗಾಗಿ 'ಕುರುಕ್ಷೇತ್ರ' ಸಿನಿಮಾ ದರ್ಶನ್ ಅವರ ಪಾಲಿಗೆ ಮರೆಯಲಾಗದ ಅಪರೂಪ ಸಿನಿಮಾ.50 ಸಿನಿಮಾ ಪೂರೈಸಿರುವ ದರ್ಶನ್ ಮುಂದೆ ಬೇರೆ ರೀತಿಯ ಸಿನಿಮಾಗಳತ್ತ ಮುಖ ಮಾಡುತ್ತಾರೆಯೇ? ಅವರಿಗೆ ಆಸಕ್ತಿ ಇದೆ. ಅದಕ್ಕೇ ಅವರು 'ಕುರುಕ್ಷೇತ್ರ' ಒಪ್ಪಿಕೊಂಡಿದ್ದು, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಿನಿಮಾ ಮಾಡಿದ್ದು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಆಸಕ್ತಿಯಿಂದ ಮಾಡುವ ನಿರ್ಮಾಪಕರು, ನಿರ್ದೇಶಕರು ಬಂದರೆ ಒಪ್ಪಿಕೊಳ್ಳುತ್ತಾರೆ.
ದಚ್ಚು ಬರ್ತ್‌ಡೇ ಪಾಲಿಸಿ ಏನು ಗೊತ್ತಾ?
ಅಭಿಮಾನಿಗಳಿಗೆ ಆದ್ಯತೆ. ನಡುರಾತ್ರಿಯೇ ಅಭಿಮಾನಿಗಳು ಕಾದು ತಾವೇ ತಂದ ಕೇಕ್ ಕತ್ತರಿಸಿ, ದರ್ಶನ್ ಜೊತೆ ಫೋಟೋ ಹೊಡೆಸಿಕೊಂಡು ಹಬ್ಬ ಆಚರಿಸಿದ ನಂತರ ಬಂಧುಮಿತ್ರ ಪರಿವಾರದವರಿಗೆ ಅವಕಾಶ. ದೂರದ ಊರುಗಳಿಂದ ಬರುವವರನ್ನು ನಿರಾಸೆಗೊಳಿಸಬಾರದು ಅನ್ನುವುದು ದರ್ಶನ್ ನಿಯಮ. ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಸಂಭ್ರಮ, ಉತ್ಸವ, ಹಬ್ಬ.ನಟನಾಗಿ ಅರ್ಧ ಶತಕದ ಹೊಸ್ತಿನಲ್ಲಿರುವ ದರ್ಶನ್ ಅವರಿಗೆ ಏನೂ ಇಲ್ಲದೆ ಶೂನ್ಯದಂತಿರುವುದೇ ಇಷ್ಟ. ಅವರ ಜೀವನದ ಬಹು ದೊಡ್ಡ ಉಡುಗೊರೆ ಅಭಿಮಾನಿಗಳು. ಐವತ್ತು ಸಿನಿಮಾ ದಾಟಿದರೂ ತಾನು ನ.೧ ನಟ ಎನ್ನುವ ರೇಸಿನಲ್ಲಿ ದರ್ಶನ್ ಇಲ್ಲ. ಯಾಕೆಂದರೆ ಅಂಥ ರೇಸಿನಲ್ಲಿರುವುದಕ್ಕಿಂತ ಅಭಿಮಾನಿಗಳ ಅಭಿಮಾನದಲ್ಲಿರುವುದು ಮುಖ್ಯ ಎನ್ನುವುದು ಅವರ ನಂಬಿಕೆ.
Comments