ಅನುಷ್ಕಾ ಪರಿ ಟ್ರೇಲರ್ ನೋಡಿ ಕೊಹ್ಲಿ ಏನಂದ್ರು ..?

ಪ್ರೇಮಿಗಳ ದಿನದಂದು ಅನುಷ್ಕಾ ಶರ್ಮ ನಟನೆಯ ಪರಿ ಟ್ರೈಲರ್ ಬಿಡುಗಡೆಯಾಗಿದ್ದು, ಇದು ಭೂತದ ಚಿತ್ರವಾಗಿದ್ದು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಅನುಷ್ಕಾ ಶರ್ಮ ಕಾಣಿಸಿಕೊಳ್ಳಲಿದ್ದಾರೆ. ಪರಿ ಸಿನಿಮಾದ ಟ್ರೈಲರ್ ಸಸ್ಪೆನ್ಸ್ ಜೊತೆ ಭಯ ಹುಟ್ಟಿಸುವಂತಿದೆ.ಟ್ರೈಲರ್ ನಲ್ಲಿ ಅನುಷ್ಕಾ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾಳೆ
ಈ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ನಾಯಕ ಹಾಗೂ ಅನುಷ್ಕಾ ಪತಿ ವಿರಾಟ್ ಕೊಹ್ಲಿ ಪರಿ ಟ್ರೈಲರನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ನನಗೆ ಕಾಯಲು ಸಾಧ್ಯವಾಗ್ತಿಲ್ಲ. ಇಂಥ ಅವತಾರವನ್ನು ಮೊದಲು ನೋಡಿರಲಿಲ್ಲವೆಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ. ಪರಿ ಟ್ರೈಲರ್ ಗೆ ಬಾಲಿವುಡ್ ನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ರಣವೀರ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟ್ರಾಗ್ರಾಮ್ ನಲ್ಲಿ ಅರೆ ಬಾಪ್ರೇ ಎಂದು ಕಮೆಂಟ್ ಮಾಡಿದ್ದಾರೆ. ಚಿತ್ರವನ್ನು ಅನುಷ್ಕಾ ಶರ್ಮಾ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿದ್ದು, ಮಾರ್ಚ್ 9.2018ರಂದು ಚಿತ್ರ ತೆರೆಗೆ ಬರಲಿದೆ.
Comments