ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಗೆ ಆಫರ್ ಗಳ ಸುರಿಮಳೆ

ಇತ್ತೀಚೆಗಷ್ಟೇ ಬಿಗ್ ಬಾಸ್ 5 ವಿನ್ನರ್ ಆದ ಚಂದನ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ಇವರಿಗೆ ಆಫರ್ ಗಳ ಸುರಿಮಳೆ ಬರುತ್ತಿದೆ ಎನ್ನಲಾಗಿದೆ. ಅಲ್ಲದೆ ಸದ್ಯದಲ್ಲೇ ದರ್ಶನ್ ರವರ 52 ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂಬ ಮಾತುಗಳು ಗಾಂಧಿ ನಗರದ ತುಂಬಾ ಹರಡಿದೆ.
ಸ್ಟಾರ್ ನಟ ಸಿನಿಮಾಗೆ ಚಂದನ್ ಮ್ಯೂಸಿಕ್ ನೀಡುವ ಸುದಿ ಇದೆ. ಅದರ ಜೊತೆಗೆ ಈಗ ಕನ್ನಡದ ನಿರ್ಮಾಪಕ ಮುನಿರತ್ನ ಕೂಡ ಚಂದನ್ ಗೆ ಬಂಪರ್ ಆಫರ್ ನೀಡಿದ್ದಾರೆ. ಮುನಿರತ್ನ ಅವರು ತಮ್ಮ ನಿರ್ಮಾಣದಲ್ಲಿ ಮುಂದೆ ಬರುವ ಒಂದು ಸಿನಿಮಾಗೆ ಸಂಗೀತ ನೀಡುವಂತೆ ಚಂದನ್ ಶೆಟ್ಟಿಗೆ ಮುನಿರತ್ನ ಒಂದು ಅವಕಾಶ ನೀಡಿದ್ದಾರೆ. ಮುನಿರತ್ನ ಇತ್ತೀಚಿಗೆ ಶಿವರಾತ್ರಿ ಪ್ರಯುಕ್ತ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಮುನಿರತ್ನ, ಚಂದನ್ ಅವರಿಗೆ ಒಂದು ಸಿನಿಮಾ ನೀಡುವುದಾಗಿ ಹೇಳಿದ್ದಾರೆ. ದರ್ಶನ್ ಮಾತ್ರವಲ್ಲದೆ ನಟ ಯಶ್ ಜೊತೆಗೆ ಕೂಡ ಒಂದು ಸಿನಿಮಾವನ್ನು ಚಂದನ್ ಶೆಟ್ಟಿ ಮಾಡುತ್ತಾರೆ ಎಂಬ ಸುದ್ದಿ ಇದೆ. ರಾಕಿಂಗ್ ಸ್ಟಾರ್ ರಾಪರ್ ಸ್ಟಾರ್ ಗೆ ಒಂದು ಅವಕಾಶ ನೀಡಿದ್ದಾರಂತೆ.
Comments