ಪ್ರೇಮಿಗಳ ದಿನಚರಣೆಗೆ ಒಳ್ಳೆ ಹುಡ್ಗ ಪ್ರಥಮ್ ನಿಂದ ಸಂದೇಶ..!!

ಬಿಗ್ ಬಾಸ್ 4 ವಿನ್ನರ್ ಆದ ಒಳ್ಳೆ ಹುಡ್ಗ ಪ್ರಥಮ್ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ನಟಿ ಸಂಜನಾರನ್ನು ಲವ್ ಮಾಡ್ಕೊಂಡು ಸೂಪರ್ ಹುಡ್ಗನಿಗೆ ಸುಮಾರಾಗಿರೋ ಹುಡುಗಿ ಎಂದೆಲ್ಲ ಮಾತನಾಡಿಕೊಂಡು ರಿಯಾಲಿಟಿ ಶೋ ಮುಗಿದಮೇಲೆ ಲವ್ ಬಗ್ಗೆ ಮಾತನಾಡಿದ್ದೆ ಕಡಿಮೆ.
ಅಷ್ಟೇ ಏಕೆ ಇಂದು ಪ್ರೇಮಿಗಳ ದಿನ ಈ ದಿನ ಸಹಜವಾಗಿ ಹುಡ್ಗ ಹುಡ್ಗಿಗ್ಗೆ ಗಿಫ್ಟ್ ಕೊಟ್ಟು ಅವಳಿಗಿಷ್ಟ ಹಾಗೂ ಹಾಗೆ ದಿನ ಕಳೀತಾರೆ ಆದ್ರೆ ಈ ಒಳ್ಳೆ ಹುಡ್ಗ ಪ್ರಥಮ್ ಬೇರೇನೇ ತರ ಪ್ರೇಮಿಗಳ ದಿನ ಆಚರಿಸುತ್ತಿದ್ದರೆ. ಅಲ್ಲದೆ ಎಲ್ಲರಿಗೂ ಸಂದೇಶ ಬೇರೆ ಕೊಡ್ತಿದ್ದಾರೆ. ಏನಪ್ಪಾ ಅದು ಅಂತೀರಾ ಹೌದು ಪ್ರಥಮ್ ತಮ್ಮ ಅಮ್ಮನಿಗೆ ಫೋನ್ ಒಂದನ್ನ ಗಿಫ್ಟ್ ಆಗಿ ನೀಡಿದ್ದಾರೆ.ಸುಮ್ನೆ ಹುಡುಗಿಯರಿಗೆ ವ್ಯಾಲೆಂಟೈನ್ಸ್ ಡೇ ಅಂತ ದುಡ್ಡು ಖರ್ಚು ಮಾಡಿ ವೇಸ್ಟ್ ಮಾಡುವ ಬದಲು ನಿಮ್ಮಮ್ಮನಿಗೆ ಒಂದು ಸೀರೆ ಕೊಡಿ. ಈ ತರಹ ನೀವು ಪ್ರೇಮಿಗಳ ದಿನ ಸೆಲೆಬ್ರೇಟ್ ಮಾಡಿ'' ಅಂತ ಪ್ರೇಮಿಗಳ ದಿನ ಪ್ರಥಮ್ ಎಲ್ಲ ಹುಡುಗರಿಗೂ ಸಂದೇಶ ನೀಡಿದ್ದಾರೆ. ಅಲ್ಲದೆ ಈ ಪ್ರೇಮಿಗಳ ದಿನವನ್ನು ಕೇವಲ ಒಂದು ದಿನಕ್ಕೆ ಮಾತ್ರ ಮೀಸಲಿಡಬೇಡಿ ಎಂದು ತಮ್ಮ ಫೇಸ್ ಬುಕ್ ಪೇಜ್ ಮೂಲಕ ಈ ಸಂದೇಶ ರವಾನಿಸಿದ್ದಾರೆ.
Comments