ನಟಿ ಪ್ರಿಯಾ ಹಾಡಿನ ವಿರುದ್ಧ ದೂರು ದಾಖಲು ?

ತನ್ನ ಕಣ್ಣೋಟದಿಂದಲೇ ಎಲ್ಲರ ಮನಗೆದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯಿಸಿರುವ ಹಾಡಿನ ವಿರುದ್ಧ ದೂರು ದಾಖಲಾಗಿದೆ. ಹಾಡಿನ ನಿರ್ಮಾಪಕರ ವಿರುದ್ಧ ಹೈದ್ರಾಬಾದ್ ನ ಫಾರೂಕ್ ನಗರ ಇಲಾಖೆಯಲ್ಲಿ ದೂರು ದಾಖಲಾಗಿದೆ.ಹಾಡಿನಲ್ಲಿರುವ ಕೆಲವು ಶಬ್ಧಗಳು ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ನಾಲ್ಕೈದು ಯುವಕರು ದೂರು ನೀಡಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ನಟಿ ಪ್ರಿಯಾ ವಿರುದ್ಧ ಯಾವುದೇ ದೂರಿಲ್ಲ. ಹಾಡಿನಲ್ಲಿ ಬಳಸಿರುವ ಶಬ್ಧಕ್ಕೆ ಮಾತ್ರ ವಿರೋಧ ವ್ಯಕ್ತವಾಗಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪ್ರಿಯಾ ಅಭಿನಯದ ಮಾಣಿಕ್ಯ ಮಲಯಾಯ ಪೂವಿ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಪ್ರಿಯಾ ಹಾಡನ್ನು ಈಗಾಗಲೇ 1.7 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಾಡನ್ನು ಚಿತ್ರದಲ್ಲಿ ಬಳಸಲಾಗ್ತಿಲ್ಲ. ಹಾಡಿನ ಮರು ಚಿತ್ರೀಕರಣ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.
Comments