ಬಾಲಿವುಡ್ ನತ್ತ ಹೆಜ್ಜೆ ಹಾಕಲಿರುವ ಯೂ ಟರ್ನ್ ಬೆಡಗಿ..!
ಯೂ ಟರ್ನ್ ಸಿನಿಮಾದಿಂದ ಎಲ್ಲರ ಗಮನ ಸೆಳೆದ ಶ್ರದ್ದಾ ಶ್ರೀನಾಥ್ ಕನ್ನಡ ಚಿತ್ರರಂಗದಲ್ಲಿ ಉತ್ತಮ ನಟನೆಯೊಂದಿಗೆ ತಮಿಳು ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡರು. ಇದೀಗ ಬಾಲಿವುಡ್ ಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೌದು ಶ್ರದ್ದಾ ಶ್ರೀನಾಥ್ ಟಿಗ್ಮಾಂಶು ದುಲಿಯಾ ನಿರ್ದೇಶನದ ಮಿಲನ್ ಟಾಕೀಸ್ ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ಗೆ ನಾಯಕಿಯಾಗಲಿದ್ದಾರೆ.
ಈ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವ ಹಂಚಿಕೊಂಡ ಅವರು ಬಾಲಿವುಡ್ ನಲ್ಲಿ ಅವಕಾಶ ದೊರೆತಿರುವುದು ನಿಜವಾಗಿಯೂ ಅನಿರೀಕ್ಷಿತ, ದಕ್ಷಿಣದ ಎಲ್ಲಾ ಚಿತ್ರರಂಗಗಳೂ ಒಂದೇ ರೀತಿ. ಆದರೆ ಬಾಲಿವುಡ್ ಮಾತ್ರ ವಿಭಿನ್ನ, ನಿರ್ದೇಶಕರೊಬ್ಬರು ನನ್ನ ಹೆಸರು ಶಿಫಾರಸು ಮಾಡಿದ್ದರು, ನಾನು ಆಡಿಶನ್ ಗೆ ಹೋಗಿ ಬಂದೆ, ಕೂಡಲೇ ನನಗೆ ಆವಕಾಶ ಕೊಟ್ಟರು ಎಂದು ಶ್ರದ್ಧಾ ತಿಳಿಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮಿಲನ್ ಟಾಕೀಸ್ ಶೂಟಿಂಗ್ ನಲ್ಲಿ ಶ್ರದ್ದಾ ಭಾಗವಹಿಸಲಿದ್ದಾರೆ, ಉತ್ತರ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಜೊತೆಗೆ ಲಕ್ನೋ ಮತ್ತು ಮಥುರಾಗಳಲ್ಲಿಯೂ ಶೂಟಿಂಗ್ ನಡೆಯಲಿದೆ. ಸರಾಗವಾಗಿ ನಾನು ಹಿಂದಿ ಮಾತನಾಡಬಲ್ಲೆ ಎಂದು ಹೇಳಿದ್ದಾರೆ.
Comments