ವಿವಾದದ ನಡುವೆಯೂ ಊಹೆಗೆ ಮೀರಿದ ಗಳಿಕೆ ಮುನ್ನುಗ್ಗಿದ 'ಪದ್ಮಾವತ್'ಚಿತ್ರ..!!

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ'ಪದ್ಮಾವತ್' ಚಿತ್ರ ತೆರೆ ಕಂಡ ಬೆನ್ನಲೇ ಹಲವಾರು ವಿವಾದಗಳಿಗೆ ಸಿಲುಕಿಕೊಂಡಿತ್ತು. ಅಲ್ಲದೆ ಚಿತ್ರ ತೆರೆ ಕಾಣಲು ಹರಸಾಹಪಡಬೇಕಾಯಿತು. ಕೊನೆಗೂ ತೆರೆಗೆ ಬಂದ ಪದ್ಮವತ್ ಬಾಕ್ಸ್ ಆಫೀಸ್ ನಲ್ಲಿ ನಂಬರ್ ಒನ್ ಎನಿಸಿಕೊಂಡು ಊಹೆಗೂ ಮೀರಿದ ಗಳಿಕೆಗೆ ಮುಂದಾದಾಯಿತು.
'ಪದ್ಮಾವತ್ ಚಿತ್ರದ ಭರ್ಜರಿ ಗಳಿಕೆ ಮುಂದುವರಿದಿದೆ. ಕಳೆದ ಶುಕ್ರವಾರ 3.5 ಕೋಟಿ, ಶನಿವಾರ 6.30 ಕೋಟಿ ಮತ್ತು ಭಾನುವಾರ 8 ಕೋಟಿ ಗಳಿಸಿದೆ. ಇದುವರೆಗಿನ ಒಟ್ಟು ಗಳಿಕೆ 53.80 ಕೋಟಿ' ಎಂದು ಖ್ಯಾತ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಬಿಡುಗಡೆಯಾದ ಮೊದಲ ವಾರ 166.50 ಕೋಟಿ, ಎರಡನೇ ವಾರ 69.50 ಕೋಟಿ ಮತ್ತು ಮೂರನೇ ವಾರ 17.80 ಕೋಟಿ ಗಳಿಸಿದೆ.
Comments