ಶಿವಣ್ಣನ ನೆಚ್ಚಿನ ಥಿಯೇಟರ್ ನಲ್ಲಿ ಟಗರು ಸಿನಿಮಾ ತೆರೆ ಕಾಣಲಿದೆ ..!
'ಟಗರು' ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಇನ್ನೂ ಸಂತೋಷ್ ಶಿವಣ್ಣನ ಫೇವರೆಟ್ ಚಿತ್ರಮಂದಿರ. ಅವರ ಎಷ್ಟೊ ಸಿನಿಮಾಗಳು ಅಲ್ಲಿ ನೂರು ದಿನವನ್ನು ಪೂರೈಸಿದೆ. ಇತ್ತೀಚಿಗಷ್ಟೆ ರಿಲೀಸ್ ಆದ 'ಮಫ್ತಿ' ಕೂಡ ಅಲ್ಲಿಯೇ ತೆರೆಗೆ ಬಂದಿತ್ತು. ಸಂತೋಷ್ ಚಿತ್ರಮಂದಿರ ಶಿವಣ್ಣನ ಲಕ್ಕಿ ಚಿತ್ರ ಮಂದಿರ ಎಂದರೆ ತಪ್ಪಾಗಲಾರದು.
ಇನ್ನು ಶಿವರಾಜ್ ಕುಮಾರ್ ಸಿನಿಮಾ ಅಂದರೆ ಕೇಳ್ಬೇಕಾ ಎಲ್ಲ ಥಿಯೇಟರ್ ನಲ್ಲಿಯು ಅವರ ಅಭಿಮಾನಿಗಾಗದ್ದೆ ಸದ್ದು. ಅದರಲ್ಲಿಯೂ ಗಾಂಧಿನಗರದ ಚಿತ್ರಮಂದಿರಗಳಲ್ಲಿ ಅವತ್ತು ಅಕ್ಷರಶಃ ಹಬ್ಬದ ವಾತಾವರಣ ಇರುತ್ತದೆ. ಅದೇ ಕಾರಣಕ್ಕೆ 'ಟಗರು' ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಿತ್ತು. ಇನ್ನೂ 'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದಲ್ಲಿದೆ
Comments